alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರನ್ನು ಹಿಂಬಾಲಿಸ್ತಿದ್ದ ಫೇಸ್ಬುಕ್ ಎಂಜಿನಿಯರ್

ಫೇಸ್ಬುಕ್, ಭದ್ರತಾ ಎಂಜಿನಿಯರ್ ಒಬ್ಬನನ್ನು ಕೆಲಸದಿಂದ ತೆಗೆದು ಹಾಕಿದೆ. ಎಂಜಿನಿಯರ್ ಆನ್ಲೈನ್ ಮೂಲಕ ಮಹಿಳೆಯರಿಗೆ ಕಿರಿಕಿರಿ ನೀಡ್ತಿದ್ದ ಎನ್ನಲಾಗಿದೆ. ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದ ನೌಕರ ಮಹಿಳೆಯರ ಬಗ್ಗೆ ಆನ್ಲೈನ್ ನಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದ. ಆನ್ಲೈನ್ ನಲ್ಲಿಯೇ ಮಹಿಳೆಯರನ್ನು ಹಿಂಬಾಲಿಸುತ್ತಿದ್ದ.

ಈ ಬಗ್ಗೆ ತನಿಖೆ ನಡೆಯುತ್ತಿದೆ. ನೌಕರನನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಫೇಸ್ಬುಕ್ ಹೇಳಿದೆ. ಫೇಸ್ಬುಕ್ ಸಂಸ್ಥೆಯಲ್ಲಿ ಕೆಲಸ ಮಾಡುವ ನೌಕರರಿಗೆ ಬಳಕೆದಾರರ ಮಾಹಿತಿಯನ್ನು ಸುರಕ್ಷಿತವಾಗಿಡಲು, ಅವ್ರ ಸಮಸ್ಯೆ ಬಗೆಹರಿಸಲು ಡೇಟಾ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಆದ್ರೆ ಸಂಸ್ಥೆ ನೌಕರರು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ನಿಯಮ ಮುರಿದ್ರೆ ಅವರನ್ನು ಕೆಲಸದಿಂದ ವಜಾ ಮಾಡುವುದಾಗಿ ಫೇಸ್ಬುಕ್ ಹೇಳಿದೆ.

ನೌಕರ ಆನ್ಲೈನ್ ನಲ್ಲಿ ಮಾಹಿತಿ ಸಂಗ್ರಹ ಮಾಡುತ್ತಿದ್ದ. ನಕಲಿ ಅಕೌಂಟ್ ತಯಾರಿಸಿ ಮಹಿಳೆಯರ ಜೊತೆ ಸಂಭಾಷಣೆ ನಡೆಸುತ್ತಿದ್ದ ಎನ್ನಲಾಗಿದೆ. ತನಗೆ ಆನ್ಲೈನ್ ನಲ್ಲಿ ಸಿಗುವ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...