alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ ಬುಕ್ ಬಳಕೆದಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ

The Facebook logo is pictured at the Facebook headquarters in Menlo Park, California, in this January 29, 2013 file photo. Facebook Inc advertising business grew at its fastest clip since before the company's May initial public offering, helping the company's revenue expand 40 percent to $1.585 billion. REUTERS/Robert Galbraith/Files (UNITED STATES - Tags: BUSINESS LOGO)

ಆಧುನಿಕತೆ ಬೆಳೆದಂತೆಲ್ಲಾ ಅಂತರ್ಜಾಲ ಬಳಕೆಯೂ ಜಾಸ್ತಿಯಾಗಿದೆ. ಸ್ಮಾರ್ಟ್ ಫೋನ್, ಕಂಪ್ಯೂಟರ್, ಇಂಟರ್ ನೆಟ್ ಬಳಕೆ ಹೆಚ್ಚಾದಂತೆ ಸಾಮಾಜಿಕ ಜಾಲತಾಣಗಳ ಬಳಕೆಯೂ ಹೆಚ್ಚಾಗಿದೆ. ಅದರಲ್ಲಿಯೂ, ಫೇಸ್ ಬುಕ್ ಬಳಕೆದಾರರ ಸಂಖ್ಯೆ ಅಪಾರ ಸಂಖ್ಯೆಯಲ್ಲಿದೆ.

ಫೇಸ್ ಬುಕ್ ಅನ್ನು ಬಳಕೆದಾರ ಸ್ನೇಹಿಯಾಗಿ ರೂಪಿಸಿದ್ದರೂ, ಕೆಲವೊಮ್ಮೆ ತೊಂದರೆ ಅನುಭವಿಸುವಂತಾದ ಉದಾಹರಣೆಗಳಿವೆ. ಇದನ್ನು ಮನಗಂಡ ಫೇಸ್ ಬುಕ್, ಕೆಲ ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಂಡು ಇನ್ನಷ್ಟು ಸುಧಾರಿತ ಕ್ರಮಗಳನ್ನು ಕೈಗೊಂಡಿದೆ. ಇದೀಗ ಬಂದಿರುವ ಹೊಸ ಮಾಹಿತಿಯಂತೆ, ಫೇಸ್ ಬುಕ್ ಪ್ರೊಫೈಲ್ ಫೋಟೋ ದುರ್ಬಳಕೆ ತಡೆಗೆ ಮುಂದಾಗಿದೆ. ಒಬ್ಬರ ಪ್ರೊಫೈಲ್ ಫೋಟೋ, ಹೆಸರು ಬಳಸಿಕೊಂಡು ಇನ್ನೊಬ್ಬರು ಫೇಸ್ ಬುಕ್ ನಲ್ಲಿ ನಕಲಿ ಖಾತೆ ತೆರೆಯದಂತೆ ಕ್ರಮಕೈಗೊಂಡಿದೆ.

ಆಕಸ್ಮಾತ್ ಖಾತೆದಾರರ ಫೋಟೋ ಬಳಸಿಕೊಂಡು ನಕಲಿ ಖಾತೆಯನ್ನು ತೆರೆಯಲು ಪ್ರಯತ್ನಿಸಿದಲ್ಲಿ ನೈಜ ಖಾತೆದಾರರಿಗೆ ಮಾಹಿತಿ ಹೋಗುತ್ತದೆ. ಅಲ್ಲದೇ, ಒಪ್ಪಿಗೆ ಇಲ್ಲದೇ, ಇನ್ನೊಬ್ಬರ ಫೋಟೋ ಶೇರ್ ಮಾಡಲು ಕೂಡ ನಿರ್ಬಂಧ ಹೇರಲಾಗಿದೆ. ಆಕಸ್ಮಾತ್ ಬಳಸಿದರೂ, ಅದನ್ನು ತೆಗೆದು ಹಾಕುವಂತಹ ವ್ಯವಸ್ಥೆಯನ್ನು ರೂಪಿಸಲಾಗಿದೆ. ಇದರೊಂದಿಗೆ ಇನ್ನೂ ಹಲವು ಸುಧಾರಿತ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...