alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಲ ಅಪ್ಲಿಕೇಶನ್ ಗಳು ನಿಮ್ಮೆಲ್ಲಾ ಮಾಹಿತಿ ಕದಿಯುತ್ತವೆ ಎಚ್ಚರ…!

smart phone use

ಸ್ಮಾರ್ಟ್ ಫೋನಿಗೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ದೊರೆಯುವ ಕೆಲವು ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವಾಗ ಜಾಗರೂಕರಾಗಿರಿ ಎಂದು ತಜ್ಞರು ಸೂಚಿಸಿದ್ದಾರೆ. ಕೆಲವೊಂದು ಅಪ್ಲಿಕೇಶನ್ ಗಳು ನಿಮ್ಮ ಖಾಸಗಿ ವಿವರಗಳಿಗೆ ಕನ್ನ ಹಾಕಬಹುದೆಂದು ಅವರುಗಳು ಎಚ್ಚರಿಸಿದ್ದಾರೆ.

ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಸ್ನೇಹಿತರಾದವರು ‘ಅನ್ ಫ್ರೆಂಡ್’ ಮಾಡಿದ್ದರೂ ಗೊತ್ತಾಗುತ್ತಿರಲಿಲ್ಲ. ಆದರೆ ಈಗ ಲಭ್ಯವಿರುವ ಕೆಲ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡಿಕೊಂಡರೆ ಫೇಸ್ ಬುಕ್ ನಲ್ಲಿರುವ ನಿಮ್ಮ ಮಾಹಿತಿಗಳು ಸೋರಿಕೆಯಾಗಬಹುದೆಂದು ಹೇಳಲಾಗಿದೆ.

ಈ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡಿಕೊಂಡ ಬಳಿಕ ಲಾಗಿನ್ ಐಡಿ ಹಾಗೂ ಪಾಸ್ ವರ್ಡ್ ದಾಖಲಿಸಿದ ವೇಳೆ ಈ ಮಾಹಿತಿಗಳು ಸೋರಿಕೆಯಾಗುತ್ತವೆ ಎನ್ನಲಾಗಿದ್ದು, ಇದು ಫೇಸ್ ಬುಕ್ ನ ನಿಯಂತ್ರಣದಲ್ಲಿರದ ಕಾರಣ ಬಳಿಕವೂ ಇವರುಗಳು ಫೇಸ್ ಬುಕ್ ಖಾತೆದಾರನ ಅಕ್ಟಿವಿಟಿಯನ್ನು ಗಮನಿಸುತ್ತಿರುತ್ತಾರೆ ಎನ್ನಲಾಗಿದೆ. ಖಾಸಗಿ ಮಾಹಿತಿಗಳನ್ನು ಕದಿಯಲೆಂದೇ ಸೃಷ್ಟಿಯಾದಂತಿರುವ ಕೆಲ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಮುನ್ನ ಯೋಚಿಸುವುದು ಸೂಕ್ತ ಎನ್ನುತ್ತಾರೆ ತಜ್ಞರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...