alex Certify
ಕನ್ನಡ ದುನಿಯಾ       Mobile App
       

Kannada Duniya

ಬರಿಗಣ್ಣಿನಿಂದ ದೇಹದೊಳಗಿನ ರೋಗ ಕಂಡು ಹಿಡಿತಾಳೆ ಈ ಹುಡುಗಿ

ex-ray-girl-1

ಸಾಮಾನ್ಯರಂತೆ ಕಾಣುವ ಈ ಹುಡುಗಿ ಅಸಾಮಾನ್ಯಳು. ರಷ್ಯಾದ ನತಾಶಾಳ ಅದ್ಬುತ ಸಾಮರ್ಥ್ಯ ಕೇಳಿದ್ರೆ ಆಶ್ಚರ್ಯವಾಗುತ್ತದೆ. ನತಾಶಾಳನ್ನು ಎಕ್ಸ್ ರೇ ಮಶಿನ್ ಅಂತಾ ಕರೆದ್ರೂ ತಪ್ಪಾಗಲಾರದು. ಪ್ರತಿಯೊಬ್ಬರ ದೇಹವನ್ನು ಹೊರಗಿನಿಂದ ನೋಡಿಯೇ ಅವರ ಆಂತರಿಕ ರೋಗ ಪತ್ತೆ ಹಚ್ಚುವ ಸಾಮರ್ಥ್ಯ ನತಾಶಾಳಿಗಿದೆ.

ಹತ್ತು ವರ್ಷದವರೆಗೆ ನತಾಶಾ ಎಲ್ಲ ಮಕ್ಕಳಂತೆ ಇದ್ದಳಂತೆ. 10 ವರ್ಷದ ಬಳಿಕ ಆಕೆಯಲ್ಲಿ ಈ ಬದಲಾವಣೆ ಕಂಡು ಬಂದಿದೆಯಂತೆ. ತಾಯಿಯ ದೇಹ ನೋಡಿಯೇ ಆಕೆಗೆ ಏನು ಸಮಸ್ಯೆ ಇದೆ ಎಂಬುದನ್ನು ನತಾಶಾ ಹೇಳಿದ್ದಳಂತೆ. ಬೇರೆಯವರ ದೇಹದಲ್ಲಾಗುವ ಸಮಸ್ಯೆ ಅರಿಯಬೇಕಾದಾಗ ನತಾಶಾ ತಾನಿರುವ ಪ್ರಪಂಚವನ್ನು ಮರೆಯುತ್ತಾಳಂತೆ. ಆದ್ರೆ ಇದರಿಂದ ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಾಳೆ ನತಾಶಾ.

ವೈದ್ಯರು ಬೇರೆ ಬೇರೆ ರೀತಿಯಲ್ಲಿ ನತಾಶಾಳ ಪರೀಕ್ಷೆ ನಡೆಸಿದ್ದಾರೆ. ರೋಗಿಯೊಬ್ಬರ ದೇಹದಲ್ಲಿ ಗಡ್ಡೆ ಬೆಳೆದಿದ್ದು,ಅದು ಎಲ್ಲಿ ಬೆಳೆದಿದೆ ಎಂಬುದನ್ನು ಹೇಳುವಂತೆ ನತಾಶಾಗೆ ವೈದ್ಯರು ಕೇಳಿದ್ದರಂತೆ. ನತಾಶಾ ತಕ್ಷಣ ಉತ್ತರ ನೀಡಿದ್ದಳಂತೆ. ಆಕೆ ಮಾತು ಕೇಳಿ ವೈದ್ಯರೇ ದಂಗಾಗಿ ಹೋಗಿದ್ದರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...