alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರಂಪ್ ಪ್ರೇಮ ಸಂಬಂಧ ಬಯಲು ಮಾಡಿದ ಕಾವಲುಗಾರ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುರಿತಾದ ಇನ್ನೊಂದು ಇಂಟ್ರಸ್ಟಿಂಗ್ ಸ್ಟೋರಿ ಹೊರ ಬಿದ್ದಿದೆ. ಈ ಸುದ್ದಿ ನೀವು ಕೇಳಿದ್ರೆ, ಟ್ರಂಪ್ ಹೀಗೆಲ್ಲಾ ಮಾಡಿದ್ರಾ ಎಂದು ಅಂದುಕೊಳ್ಳುವುದು ಖಚಿತ. ಎಸ್….ಟ್ರಂಪ್ ತನ್ನ ಮಾಜಿ ಕೆಲಸದ ಯುವತಿಯ ಜೊತೆ ದೈಹಿಕ ಸಂಬಂಧ ಹೊಂದಿದ್ದರು, ಅಲ್ಲದೆ ಮಗು ಕೂಡಾ ಜನಿಸಿತ್ತು ಎಂದು ಟ್ರಂಪ್ ಟವರ್ ನ ಮಾಜಿ ಕಾವಲುಗಾರ ಹೇಳಿದ್ದಾನೆ.

ಇದೇ ಏಪ್ರಿಲ್ ನಲ್ಲಿ ನಡೆದ ಸಂದರ್ಶನದಲ್ಲಿ ಮಾಜಿ ಕಾವಲುಗಾರ ಸಾಜುದಿನ್, ನನಗೆ ತಿಳಿದಂತೆ ಡೋನಾಲ್ಡ್ ಟ್ರಂಪ್ ಗೆ, ಕೆಲಸದ ಯುವತಿಯ ಸಂಬಂಧದಿಂದ ಮಗು ಜನಿಸಿತ್ತು ಎಂದು ತಿಳಿಸಿದ್ದ.

ಕಾವಲುಗಾರ ಡಿನೊ ಸಾಜುದಿನ್ ರನ್ನು ಸಂಸ್ಥೆ ಈ ಹಿಂದೆ ಕೆಲಸದಿಂದ ವಜಾ ಮಾಡಿತ್ತು. ಅಲ್ಲದೆ ಟ್ರಂಪ್ ರ ಅಕ್ರಮ ಸಂಬಂಧವನ್ನು ಹೊರಗೆ ಪ್ರಸ್ತಾಪಿಸದಂತೆ ಸೂಚನೆ ನೀಡಿತ್ತು. ಈಗ ಹೇರಲಾಧ ಅವಧಿ ಮುಕ್ತಾಯವಾಗಿದ್ದರಿಂದ ಸಾಜುದ್ದಿನ್ ಅವರು ಸ್ವತಂತ್ರರಾಗಿದ್ದಾರೆ ಎಂದು ಸಾಜುದಿನ್ ಪರ ವಕೀಲ್ ರು ತಿಳಿಸಿದ್ದಾರೆ. ಸಾಜುದಿನ್ ಅವರ ಈ ಹೇಳಿಕೆಯನ್ನು ಎಎಂಐ ತಳ್ಳಿ ಹಾಕಿದೆ. ಸಾಜುದಿನ್ ಆರೋಪ ಆಧಾರರಹಿತ ಎಂದು ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...