alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರಂಪ್ ಕುರಿತು ಸ್ಪೋಟಕ ಸತ್ಯ ಬಿಚ್ಚಿಟ್ಟ ಮಾಡೆಲ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೊಂದಿಗೆ 2006ರಲ್ಲಿ 10 ತಿಂಗಳುಗಳ ಕಾಲ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗ್ತಿರೋ ಮಾಜಿ ಪ್ಲೇಬಾಯ್ ರೂಪದರ್ಶಿ ಕರೆನ್ ಮೆಕ್ಡೊಗಲ್ ಮತ್ತಷ್ಟು ಆಘಾತಕಾರಿ ವಿವರಗಳನ್ನು ಬಹಿರಂಗಪಡಿಸಿದ್ದಾಳೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಕರೆನ್, ತನ್ನನ್ನು ಪ್ರೀತಿಸುತ್ತಿರುವುದಾಗಿ ಟ್ರಂಪ್ ಹಲವು ಬಾರಿ ಹೇಳಿದ್ದರು. ಅವರು ತನ್ನನ್ನೇ ಮದುವೆಯಾಗಬಹುದು ಅನ್ನೊ ನಿರೀಕ್ಷೆಯೂ ಇತ್ತು ಎಂದಿದ್ದಾಳೆ. 2006ರ ಜೂನ್ ನಲ್ಲಿ ಟ್ರಂಪ್ ಹಾಗೂ ಕರೆನ್ ಮಧ್ಯೆ ಅಫೇರ್ ಶುರುವಾಗಿತ್ತಂತೆ.

ಆ ಸಮಯದಲ್ಲಿ ಟ್ರಂಪ್ ಪತ್ನಿ ಮೆಲಾನಿಯಾ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಡಜನ್ ಗಟ್ಟಲೆ ಬಾರಿ ಟ್ರಂಪ್ ತನ್ನೊಂದಿಗೆ ಸೆಕ್ಸ್ ಮಾಡಿದ್ದಾರೆ ಅಂತಾ ಕರೆನ್ ಹೇಳಿಕೊಂಡಿದ್ದಾಳೆ. ಟ್ರಂಪ್ ರ ಬ್ರೇವರಿ ಹಿಲ್ಸ್ ಹೋಟೆಲ್ ಬಂಗಲೆಯಲ್ಲೇ ಮೊದಲ ಬಾರಿಗೆ ಸಂಧಿಸಿದ್ದೆವು.

ಸೆಕ್ಸ್ ಬಳಿಕ ಟ್ರಂಪ್ ನನಗೆ ಹಣ ಕೂಡ ಆಫರ್ ಮಾಡಿದ್ದರು ಅಂತಾ ಕರೆನ್ ಹೇಳಿದ್ದಾಳೆ. ಆ ಹಣವನ್ನು ಪಡೆಯಲು ನಿರಾಕರಿಸಿದ ಕರೆನ್, ತಾನು ಅಂಥವಳಲ್ಲ ಅಂತಾ ಟ್ರಂಪ್ ಗೆ ಸ್ಪಷ್ಟಪಡಿಸಿದ್ದಳಂತೆ.

ನ್ಯೂಯಾರ್ಕ್ ನಲ್ಲಿರೋ ಟ್ರಂಪ್ ಟವರ್ ಅಪಾರ್ಟ್ಮೆಂಟ್ ಗೂ ಹೋಗಿದ್ದೆ, ಟ್ರಂಪ್ ಹಾಗೂ ನಾನು ಹಿಂಬಾಗಿಲಿನಿಂದ ಒಳಪ್ರವೇಶಿಸಿದ್ದೆವು ಎಂದಿದ್ದಾಳೆ. ಆದ್ರೆ ಇದನ್ನೆಲ್ಲ ಡೊನಾಲ್ಡ್ ಟ್ರಂಪ್ ಅಲ್ಲಗಳೆಯುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...