alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾದಕ್ಕೆ ಕಾರಣವಾಯ್ತು ರಾಖಿ ಸಾವಂತ್ ಸೆಕ್ಸಿ ಡ್ರೆಸ್ ‘ಮೋಡಿ’

rakhi dress

ಸದಾ ಒಂದಲ್ಲ ಒಂದು ವಿವಾದಗಳ ಮೂಲಕವೇ ಸುದ್ದಿಯಾಗುವ ಬಹುಭಾಷಾ ನಟಿ ರಾಖಿ ಸಾವಂತ್, ಇದೀಗ ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿವಾದ ಮೂಡಿಸಿದ್ದಾರೆ. ಅಷ್ಟಕ್ಕೂ ಏನಿದು ವಿವಾದ ಎಂಬುದನ್ನು ತಿಳಿಯಲು ಮುಂದೆ ಓದಿ.

ಅಮೆರಿಕದ ಇಲಿನಾಯ್ಸ್ ನಲ್ಲಿರುವ ಅನಿವಾಸಿ ಭಾರತೀಯರು ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ನಟಿ ರಾಖಿ ಸಾವಂತ್ ಭಾಗವಹಿಸಿದ್ದು, ಈ ಸಂದರ್ಭದಲ್ಲಿ ಸೆಕ್ಸಿ ಡ್ರೆಸ್ ತೊಟ್ಟಿದ್ದಾಳೆ. ಬರಿ ಸೆಕ್ಸಿ ಡ್ರೆಸ್ ತೊಟ್ಟರೆ ವಿವಾದವಾಗುತ್ತಿರಲಿಲ್ಲ. ಆಕೆ ತೊಟ್ಟಿದ್ದ ಡ್ರೆಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಕೂಡ ಇವೆ. ಇದೇ ಭಾರೀ ವಿವಾದಕ್ಕೆ ಕಾರಣವಾಗಿದೆ.

ವಿಚಿತ್ರ ರೀತಿಯಲ್ಲಿದ್ದ ಸೆಕ್ಸಿ ಡ್ರೆಸ್ ತೊಟ್ಟಿದ್ದ ರಾಖಿ, ಅದರ ಮೇಲೆಲ್ಲಾ ನರೇಂದ್ರ ಮೋದಿ ಅವರ ಭಾವಚಿತ್ರ ಅಂಟಿಸಿಕೊಂಡಿದ್ದು, ಅಶ್ಲೀಲ ಭಂಗಿಯಲ್ಲಿ ಪೋಸ್ ಕೂಡ ನೀಡಿದ್ದಾಳೆ. ಇದು ವಿವಾದಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...