alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಗ್ರಾಮದಲ್ಲಿ ಯಾರೂ ಬಟ್ಟೆ ಧರಿಸೋದಿಲ್ಲ…!

nm-19

ಓದಲು ಇದು ಸ್ವಲ್ಪ ವಿಚಿತ್ರವೆನಿಸಬಹುದು. ಆದ್ರೆ ಇದು ಸತ್ಯ. ಬ್ರಿಟನ್ ನ ಒಂದು ಪ್ರದೇಶದ ಜನ ಆಧುನಿಕತೆಯಿಂದ ಸಂಪೂರ್ಣ ದೂರವುಳಿದಿದ್ದಾರೆ. ಅಲ್ಲಿನ ಜೀವನ ಶೈಲಿ ವಿಭಿನ್ನ ಮತ್ತು ದಿಗ್ಭ್ರಮೆಗೊಳಿಸುವಂತಿದೆ.

ಈ ಪ್ರದೇಶದಲ್ಲಿ ವಾಸಿಸುವ ಯಾವುದೇ ವ್ಯಕ್ತಿ ಬಟ್ಟೆ ಧರಿಸುವುದಿಲ್ಲ. ಸುಮಾರು 80 ವರ್ಷಗಳಿಂದ ಈ ಜೀವನ ಶೈಲಿ ರೂಢಿಸಿಕೊಂಡು ಬಂದಿದ್ದಾರೆ ಇಲ್ಲಿನ ಜನರು. ಈ ಗ್ರಾಮದಲ್ಲಿ ವಾಸಿಸುವ ಮಹಿಳೆ ಅಥವಾ ಪುರುಷ, ಹಿರಿಯ ಅಥವಾ ಕಿರಿಯ ಯಾರೂ ಬಟ್ಟೆ ಧರಿಸುವುದಿಲ್ಲ. ಈ ಗ್ರಾಮ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಆಧುನಿಕತೆಯಿಂದ ದೂರ ಇರುವ ಈ ಗ್ರಾಮವನ್ನು ನೋಡಲು ಎಲ್ಲೆಡೆಯಿಂದ ಪ್ರವಾಸಿಗರು ಬರ್ತಾರೆ. ಈ ಗ್ರಾಮಕ್ಕೆ ಬಂದ ಪ್ರವಾಸಿಗರು ಬಾಡಿಗೆ ಮನೆ ಪಡೆದು ವಾಸ ಮಾಡಬೇಕು. ಜೊತೆಗೆ ಇಲ್ಲಿನ ಪದ್ಧತಿಯಂತೆ ನಡೆದುಕೊಳ್ಳಬೇಕು. ಅವರೂ ವಿವಸ್ತ್ರರಾಗಿ ಗ್ರಾಮ ಸುತ್ತಬೇಕಾಗುತ್ತದೆ.

Spielplatz ಹೆಸರಿನ ಈ ಗ್ರಾಮದ ಬಗ್ಗೆ ಅನೇಕರಿಗೆ ಈವರೆಗೂ ತಿಳಿದಿಲ್ಲ. ಈ ಗ್ರಾಮದ ಬಂಗಲೆ, ಈಜುಕೊಳ ಸೇರಿದಂತೆ ಆಹಾರ-ಉಪಹಾರಕ್ಕೆ ಎಲ್ಲ ವ್ಯವಸ್ಥೆ ಇದೆ. 1929ರಲ್ಲಿ ಈ ಗ್ರಾಮ ಸ್ಥಾಪನೆಯಾಯ್ತು. ಅಲ್ಲಿಂದ ಜನರು ಪ್ರಕೃತಿಗೆ ಹತ್ತಿರವಾಗಿ ವಾಸಮಾಡುವ ನಿರ್ಧಾರ ಕೈಗೊಂಡರು. ಹಾಗಾಗಿ ಬಟ್ಟೆ ಧರಿಸುವುದನ್ನು ತ್ಯಜಿಸಿದ್ರು. ಚಳಿಗಾಲದಲ್ಲಿ ಅವಶ್ಯಕತೆ ಇರುವವರು ಬಟ್ಟೆ ಧರಿಸಲು ಇಲ್ಲಿನವರಿಗೆ ಸ್ವಾತಂತ್ರ್ಯವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...