alex Certify
ಕನ್ನಡ ದುನಿಯಾ       Mobile App
       

Kannada Duniya

ಬಲಾಡ್ಯರನ್ನು ಹಿಂದಿಕ್ಕಿದ ಪಪ್ಪಿ –ಮ್ಯಾರಥಾನ್ ನಲ್ಲಿ 7ನೇ ರ್ಯಾಂಕ್

puppy1

ಲುಡಿವಿನ್ ಹೆಸರಿನ ನಾಯಿ ಈಗ ಫೇಮಸ್ ಆಗ್ಬಿಟ್ಟಿದೆ. ಹಾಫ್ ಮ್ಯಾರಥಾನ್ ನಲ್ಲಿ ಒಂದುವರೆ ಗಂಟೆ ಓಡಿ ಏಳನೇ ಸ್ಥಾನ ಪಡೆದಿದೆ. ಅದು ಸ್ಪರ್ಧಿಸಿದ್ದು ನಾಯಿಗಳ ಜೊತೆ ಅಲ್ಲ, ಮನುಷ್ಯರ ಜೊತೆ.

ಲುಡಿವಿನ್ ತನ್ನ ಮಾಲಿಕರ ಜೊತೆ ವಿಹಾರಕ್ಕೆ ಬಂದಿತ್ತು. ವಿಹಾರದ ವೇಳೆ ನಾಯಿ ತಪ್ಪಿಸಿಕೊಂಡಿದೆ. ಮಾಲೀಕರನ್ನು ಹುಡುಕುತ್ತ ಲುಡಿವಿನ್ ಹಾಫ್ ಮ್ಯಾರಥಾನ್ ನಡೆಯುತ್ತಿದ್ದ ಸ್ಥಳಕ್ಕೆ ಬಂದಿದೆ. ಓಡುತ್ತಿದ್ದ ಪುರುಷರ ಜೊತೆ ತಾನೂ ಓಡಲಾರಂಭಿಸಿದೆ.

ಸ್ಪರ್ಧೆಯಲ್ಲಿ 165 ಮಂದಿ ಪಾಲ್ಗೊಂಡಿದ್ದರಂತೆ. ಲುಡಿವಿನ್ ಒಂದುವರೆ ಗಂಟೆಯಲ್ಲಿ 21 ಕಿಲೋಮೀಟರ್ ಓಡಿ ಏಳನೇ ಸ್ಥಾನ ಪಡೆದಿದೆ. ಎರಡುವರೆ ವರ್ಷದ ಲುಡಿವಿನ್, ಸಾಕಷ್ಟು ಶಕ್ತಶಾಲಿಯುಳ್ಳ ಓಟಗಾರರ ಜೊತೆ ಟ್ರ್ಯಾಕ್ ಹಂಚಿಕೊಂಡಿತ್ತು.

ಲುಡಿವಿನ್ ನನ್ನು ಹ್ಯಾಮ್ಲಿನ್ ಎಂಬಾಕೆ ಸಾಕಿದ್ದಾಳೆ. ಮ್ಯಾರಥಾನ್ ನಲ್ಲಿ ಲುಡಿವಿನ್ ಇದೆ ಎಂಬುದು ಹ್ಯಾಮ್ಲಿನ್ ಗೆ ಆಕೆ ಸ್ನೇಹಿತೆ ಹೇಳಿದಳಂತೆ. ಇದರಿಂದ ಹ್ಯಾಮ್ಲಿನ್ ಗಾಬರಿಗೊಂಡಿದ್ದಳಂತೆ. ಲುಡಿವಿನ್ ಓಟಗಾರರಿಗೆ ತೊಂದರೆ ಮಾಡಿದ್ದರೆ ಎಂಬ ಭಯ ಆಕೆಯನ್ನು ಕಾಡಿತ್ತಂತೆ. ಆದ್ರೆ ಲುಡಿವಿನ್ 7 ಸ್ಥಾನ ಪಡೆದಿರುವ ವಿಷಯ ಕೇಳಿ ಖುಷಿಯಾಯ್ತಂತೆ. ಹಾಫ್ ಮ್ಯಾರಥಾನ್ ನಲ್ಲಿ 7ನೇ ಸ್ಥಾನ ಪಡೆದಿರುವ ಲುಡಿವಿನ್ ಗೆ ಪದಕ ಹಾಕಿ ಸನ್ಮಾನ ಮಾಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...