alex Certify
ಕನ್ನಡ ದುನಿಯಾ       Mobile App
       

Kannada Duniya

ಚಂದ್ರನ ಮೇಲೆ ನಡೆದಿದ್ದ ಗಗನಯಾತ್ರಿ ಇನ್ನಿಲ್ಲ

moon-man

ಚಂದ್ರನ ಮೇಲೆ ಕಾಲಿಟ್ಟಿದ್ದ ಕೊನೆಯ ವ್ಯಕ್ತಿ ಎನಿಸಿಕೊಂಡಿದ್ದ ಅಮೆರಿಕದ ಗಗನಯಾತ್ರಿ ಯುಜೀನ್ ಸೆರ್ನನ್ ಸಾವನ್ನಪ್ಪಿದ್ದಾರೆ, ಅವರಿಗೆ 82 ವರ್ಷ ವಯಸ್ಸಾಗಿತ್ತು.ಯುಜೀನ್ ‘ಅಪೊಲೊ 17’ ನ ಬಾಹ್ಯಾಕಾಶ ಕಮಾಂಡರ್ ಆಗಿದ್ದರು. 1972ರ ಡಿಸೆಂಬರ್ ಲ್ಲಿ ಮೂರನೇ ಬಾರಿ ಆಕಾಶಯಾನ ಕೈಗೊಂಡಿದ್ದ ಯುಜೀನ್,  ಅಮೆರಿಕದ ಕೊನೆಯ ಚಂದ್ರಯಾನದ ಭಾಗವಾಗಿದ್ದರು.

ಯುಜೀನ್ ನಿಧನಕ್ಕೆ ನಾಸಾ ಸಂತಾಪ ವ್ಯಕ್ತಪಡಿಸಿದೆ. ನಿವೃತ್ತ ನೌಕಾ ಅಧಿಕಾರಿಯಾಗಿದ್ದ ಯುಜೀನ್ ಅನಾರೋಗ್ಯದಿಂದ ಮೃತಪಟ್ಟಿದ್ದಾರೆಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. 82ರ ಹರೆಯದಲ್ಲೂ ಯುಜೀನ್ ಅವರಿಗೆ ಬಾಹ್ಯಾಕಾಶ ಯಾನದ ಬಗ್ಗೆ ಅಪಾರ ಉತ್ಸಾಹ ಹಾಗೂ ಒಲವಿತ್ತು. ಯುವಜನತೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಬೇಕೆಂದು ಅವರು ಬಯಸಿದ್ದರು.

1934ರಲ್ಲಿ ಚಿಕಾಗೋದಲ್ಲಿ ಜನಿಸಿದ್ದ ಅವರು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರರು. ವೈಮಾನಿಕ ಎಂಜಿನಿಯರಿಂಗ್ ನಲ್ಲಿ ಮಾಸ್ಟರ್ಸ್ ಮುಗಿಸಿದ್ದರು. 1963ರಲ್ಲಿ ನಾಸಾ ಪ್ರವೇಶಕ್ಕೆ ಆಯ್ಕೆಯಾದ ಗಗನಯಾತ್ರಿಗಳಲ್ಲಿ ಯುಜೀನ್ ಕೂಡ ಒಬ್ಬರಾಗಿದ್ದರು. 566 ಗಂಟೆಗಳನ್ನು ಬಾಹ್ಯಾಕಾಶದಲ್ಲಿ ಕಳೆದಿರುವ ಯುಜೀನ್, ಚಂದ್ರನ ಮೇಲೆ 73 ಗಂಟೆಗಳ ಕಾಲ ಇದ್ದರು. ಅವರ ಬದುಕನ್ನು ಆಧರಿತ ಡಾಕ್ಯುಮೆಂಟರಿ ‘ದಿ ಲಾಸ್ಟ್ ಮ್ಯಾನ್ ಆನ್ ದಿ ಮೂನ್’ 2016ರಲ್ಲಿ ಬಿಡುಗಡೆಯಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...