alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲಿಂದ ಪರಾರಿಯಾದ್ರು 290 ಕೈದಿಗಳು

ind-jail

ಜೈಲಿನಲ್ಲಿ ಹಿಂಸೆ ಅನುಭವಿಸಿ ಸಾಕಾಗಿದ್ದ 290 ಕೈದಿಗಳು, ಭದ್ರತಾ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.

ಸುಮಾತ್ರ ದ್ವೀಪ ಸಮೀಪದ ಪೆಕಂಬಾರು ಬಂಗ್ ಕುಕ್ ಜೈಲಿನಲ್ಲಿ ಪ್ರಾರ್ಥನೆಗೆಂದು ಕೈದಿಗಳನ್ನು ಹೊರಬಿಡಲಾಗಿತ್ತು. ಈ ಸಂದರ್ಭದಲ್ಲಿ ಕೈದಿಗಳೆಲ್ಲ ಕಾಲಿಗೆ ಬುದ್ಧಿ ಹೇಳಿದ್ದಾರೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಹಾಗೂ ಯೋಧರು ಪರಾರಿಯಾಗಿದ್ದ ಶೇ.80 ರಷ್ಟು ಕೈದಿಗಳನ್ನು ಬಂಧಿಸಿದ್ದಾರೆ.

ಈ ಜೈಲಿನಲ್ಲಿ 300 ಮಂದಿಗೆ ಮಾತ್ರ ಸ್ಥಳಾವಕಾಶವಿದ್ದು, 1780 ಕೈದಿಗಳನ್ನು ಬಂಧಿಸಿಡಲಾಗಿತ್ತು. ಕೇವಲ 5 ಮಂದಿ ಕಾವಲುಗಾರರು, ಓರ್ವ ಕೆಲಸಗಾರ ಮಾತ್ರ ಜೈಲಿನಲ್ಲಿದ್ದು, ಕೆಲಸಗಳನ್ನೆಲ್ಲಾ ಕೈದಿಗಳೇ ನಿರ್ವಹಿಸಬೇಕಿದೆ.

ಇಕ್ಕಟ್ಟಾದ ಸ್ಥಳದಲ್ಲಿ ಶಿಕ್ಷೆ ಅನುಭವಿಸಿ ಸಾಕಾದ ಕೈದಿಗಳು ಸಾಕಪ್ಪಾ ಜೈಲು ವಾಸ ಎಂದು ಪರಾರಿಯಾಗಿದ್ದರು. ಆದರೆ, ಹಲವರ ಅದೃಷ್ಟ ಸರಿ ಇರಲಿಲ್ಲ. ಅವರು ಮನೆ ತಲುಪುವಷ್ಟರಲ್ಲೇ ಮತ್ತೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...