alex Certify
ಕನ್ನಡ ದುನಿಯಾ       Mobile App
       

Kannada Duniya

ಪೋಪ್‌ ಬಂದೊಡನೆ ಈ ಪುಟ್ಟ ಪೋರಿ ಮಾಡಿದ್ದೇನು…?

ಐರ್ಲ್ಯಾಂಡ್‌ಗೆ ಭೇಟಿ ನೀಡಿದ ವೇಳೆ 12 ವರ್ಷದ ಪುಟ್ಟ ಪೋರಿ, ಪೋಪ್‌ ಜೊತೆಗೆ ಸೆಲ್ಫಿ ತೆಗೆದುಕೊಂಡು ಸುದ್ದಿಯಾಗಿದ್ದಾಳೆ.

ದುಬ್ಲಿನ್‌ನ ಅಲಿಸನ್‌ ನೆವಿನ್‌ ಪೋಪ್‌ ಜತೆಗೆ ಸೆಲ್ಫಿ ತೆಗೆದುಕೊಂಡು ಆನ್‌ಲೈನ್‌ನಲ್ಲಿ ಸುದ್ದಿಯಾದ ಹುಡುಗಿ. ನೆರೆದಿದ್ದ ಅಪಾರ ಸಂಖ್ಯೆಯ ಜನಸಂದಣಿಯಲ್ಲಿ ಪೋಪ್‌ ಬಳಿ ನೇರವಾಗಿ, ನಾನು ನಿಮ್ಮ ಜತೆ ಒಂದು ಸೆಲ್ಫಿ ತೆಗೆದುಕೊಳ್ಳಬಹುದಾ ಎಂದು ಕೇಳಿದ್ದಾಳೆ.

ಒಂದು ಕ್ಷಣ ಆಕೆಯನ್ನು ನೋಡಿದ ಪೋಪ್, ಬಳಿಕ ಆಕೆಯ ಕೋರಿಕೆಗೆ ಒಪ್ಪಿಕೊಂಡಿದ್ದಾರೆ. ಹುಡುಗಿಯ ನೇರ ನುಡಿಗೆ ಪೋಪ್‌ ಸೇರಿದಂತೆ ನೆರೆದ ಜನಸ್ತೋಮವೇ ಮೂಗಿನ ಮೇಲೆ ಬೆರಳಿಟ್ಟಿದೆ.

ಈ ಸೆಲ್ಫಿಯ ಫೋಟೋ ಟ್ವಿಟರ್‌ನಲ್ಲಿ 5 ಸಾವಿರ ಲೈಕ್‌ ಹಾಗೂ ನೂರಕ್ಕೂ ಅಧಿಕ ಕಮೆಂಟ್ಸ್‌ಗಳನ್ನು ಬಾಚಿಕೊಂಡಿದೆ. ಇಷ್ಟು ಮಾತ್ರ ಅಲ್ಲ, ಎಲ್ಲರನ್ನೂ ಪೋಪ್‌ ಜತೆಗೆ ಸೆಲ್ಫಿ ಪೋಸ್ಟ್‌ ಮಾಡಲು ಪ್ರೇರೇಪಿಸಿದೆ. ಆದರೆ ಯಾರಿಗೂ ಅಲಿಸನ್‌ ನಷ್ಟು ಸ್ಪಷ್ಟ ಸೆಲ್ಫಿ ಸಿಕ್ಕಿಲ್ಲ.

2013ರಲ್ಲಿ ಮೊದಲ ಬಾರಿಗೆ ಪೋಪ್‌ ಸೆಲ್ಫಿಗೆ ಪೋಸ್‌ ನೀಡಿದ್ದರು. ವಾಟಿಕನ್‌ಗೆ ಭೇಟಿ ನೀಡಿದ್ದ ಯುವಕರ ಗುಂಪಿನೊಂದಿಗೆ ಶಿಷ್ಟಾಚಾರಗಳನ್ನು ಬದಿಗೊತ್ತಿ ಪೋಪ್‌ ಸೆಲ್ಫಿಗೆ ಪೋಸ್‌ ನೀಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...