alex Certify
ಕನ್ನಡ ದುನಿಯಾ       Mobile App
       

Kannada Duniya

ನಿಯಮಿತವಾಗಿ ಮಾಡೋ ಈ ಕ್ರಿಯೆ ಮಹಿಳೆಯರಿಗೆ ಅಪಾಯಕಾರಿ

bad

ನಿಯಮಿತವಾಗಿ ಸಂಭೋಗ ನಡೆಸುವುದರಿಂದ ಹೃದಯ ಸಂಬಂಧಿ ಖಾಯಿಲೆಗಳಿಂದ ದೂರವಿರಬಹುದು ಅನ್ನೋದು ವೈಜ್ಞಾನಿಕ ಸಂಶೋಧನೆಗಳಿಂದ್ಲೇ ದೃಢಪಟ್ಟಿದೆ. ಆದ್ರೆ ನಿಯಮಿತ ದೈಹಿಕ ಸಂಬಂಧ ಮಹಿಳೆಯರ ಪಾಲಿಗೆ ಆರೋಗ್ಯಕರವಲ್ಲ. ವಾರದಲ್ಲಿ ಹಲವು ಬಾರಿ ಲೈಂಗಿಕ ಸಂಬಂಧ ಹೊಂದುವುದರಿಂದ ಸಮಸ್ಯೆಗಳು ಎದುರಾಗುತ್ತವೆ.

ಸಂಶೋಧನೆಯೊಂದರ ಪ್ರಕಾರ ರಕ್ತದಲ್ಲಿ ಅಪಾಯಕಾರಿ ರಾಸಾಯನಿಕಗಳು ಸೇರ್ಪಡೆಗೊಳ್ಳುತ್ತವೆ, ಇದರಿಂದ ಕಾರ್ಡಿಯಾಕ್ ಸಮಸ್ಯೆಯೂ ಉದ್ಭವಿಸಬಹುದು. ಪುರುಷರು ನಿಯಮಿತವಾಗಿ ಸೆಕ್ಸ್ ಮಾಡುವುದರಿಂದ ಅವರಲ್ಲಿ ರಕ್ತಸಂಚಾರ ಸುಗಮವಾಗುತ್ತದೆ, ರಕ್ತನಾಳಗಳು ಕೂಡ ಆರೋಗ್ಯಕರವಾಗಿರುತ್ತವೆ.

ಆದ್ರೆ ಮಹಿಳೆಯರಲ್ಲಿ ಸೆಕ್ಸ್ ನಿಂದ ಹೋಮೋಸಿಸ್ಟೈನ್ ನಿಯಂತ್ರಣಕ್ಕೆ ಬರುವುದಿಲ್ಲ. ಬ್ರಿಟನ್ ನಲ್ಲಿ ಪ್ರತಿವರ್ಷ 73,000 ಜನರು ಪರಿಧಮನಿಯ ಹೃದಯ ರೋಗದಿಂದ (ಕೊರೊನರಿ ಹಾರ್ಟ್ ಡಿಸೀಸ್) ಸಾವನ್ನಪ್ಪುತ್ತಿದ್ದಾರೆ. ನಿಯಮಿತವಾದ ದೈಹಿಕ ಸಂಬಂಧ ಈ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದೇ ನಂಬಲಾಗಿತ್ತು.

ಆದ್ರೆ ವಾರಕ್ಕೆ ಎರಡು ಬಾರಿ ಸಂಭೋಗ ನಡೆಸುವುದಕ್ಕಿಂತ ತಿಂಗಳಿಗೆ ಒಮ್ಮೆ ಸೆಕ್ಸ್ ಮಾಡುವುದು ಅಪಧಮನಿಗಳ ಆರೋಗ್ಯಕ್ಕೆ ಒಳ್ಳೆಯದು ಅನ್ನೋದು ಸಂಶೋಧನೆಯಲ್ಲಿ ದೃಢಪಟ್ಟಿದೆ. ದೇಹದಲ್ಲಿರುವ ಪ್ರೋಟೀನ್ ಗಳೇ ಬ್ಲಾಕ್ ಆಗಿ ಕೆಮಿಕಲ್ ರೂಪ ಪಡೆದಿರುತ್ತವೆ. ಇವು ಅತಿಯಾದಾಗ ಹೃದಯಕ್ಕೆ ರಕ್ತ ಪೂರೈಸುವ ರಕ್ತನಾಳಗಳಿಗೆ ಅಪಾಯ ಉಂಟುಮಾಡುತ್ತವೆ.

ಹೋಮೋಸಿಸ್ಟೈನ್ ಗಳ ಹೆಚ್ಚಳದಿಂದ್ಲೇ ಹೃದಯ ಸಂಬಂಧಿ ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ ಅನ್ನೋದು ದೃಢಪಟ್ಟಿದೆ. ವಾರಕ್ಕೆ ಹಲವು ಬಾರಿ ಸಂಭೋಗ ನಡೆಸಿದಾಗ ಪುರುಷರಲ್ಲಿ ಹೋಮೋಸಿಸ್ಟೈನ್ ಮಟ್ಟ ಕಡಿಮೆಯಾದ್ರೆ, ಮಹಿಳೆಯಲ್ಲಿ ಹೆಚ್ಚಾಗುವ ಸಾಧ್ಯತೆಗಳೇ ಅಧಿಕ. ಹಾಗಾಗಿ ಆರೋಗ್ಯಕರ ದೈಹಿಕ ಸಂಬಂಧ ಹೊಂದುವಂತೆ ವಿಜ್ಞಾನಿಗಳು ಕರೆಕೊಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...