alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವಲ್ಪದರಲ್ಲಿ ತಪ್ಪಿದೆ ಭಾರೀ ದುರಂತ

ಟರ್ಕಿಯ ಇಸ್ತಾಂಬುಲ್ ವಿಮಾನ ನಿಲ್ದಾಣದಲ್ಲಿ ನಡೆಯಲಿದ್ದ ಭೀಕರ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ. ವಿಮಾನದಲ್ಲಿದ್ದ ಪ್ರಯಾಣಿಕರು ಈ ಘಟನೆ ಬಳಿಕ ತಾವು ಮರುಜನ್ಮ ಪಡೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.

ಮೇ 13 ರಂದು ಇಸ್ತಾಂಬುಲ್ ನ ಅಟಟುರ್ಕ್ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, 200 ಮಂದಿ ಪ್ರಯಾಣಿಕರಿದ್ದ ಅಸಿಯಾನಾ ಏರ್ಲೈನ್ಸ್ ಗೆ ಸೇರಿದ ವಿಮಾನ ಲ್ಯಾಂಡ್ ಆಗುವ ವೇಳೆ ಈ ಮೊದಲೇ ನಿಂತಿದ್ದ ಟರ್ಕಿ ಏರ್ಲೈನ್ಸ್ ವಿಮಾನಕ್ಕೆ ಡಿಕ್ಕಿ ಹೊಡೆದಿದೆ.

ಅಸಿಯಾನಾ ಏರ್ಲೈನ್ಸ್ ವಿಮಾನದ ಬಲ ಭಾಗದ ರೆಕ್ಕೆ ಟರ್ಕಿ ಏರ್ಲೈನ್ಸ್ ವಿಮಾನಕ್ಕೆ ತಾಗಿದ್ದು, ಈ ವೇಳೆ ದೊಡ್ಡ ಶಬ್ದ ಉಂಟಾಗಿದೆ. ಅಲ್ಲದೇ ಬೆಂಕಿಯೂ ಹೊತ್ತಿಕೊಂಡಿತ್ತೆನ್ನಲಾಗಿದ್ದು, ಆದರೆ ಕೂಡಲೇ ಪ್ರಯಾಣಿಕರನ್ನು ಕೆಳಗಿಳಿಸಿದ ಕಾರಣ ಯಾರಿಗೂ ಅಪಾಯವಾಗಿಲ್ಲ. ಈ ಅಪಘಾತದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...