alex Certify
ಕನ್ನಡ ದುನಿಯಾ       Mobile App
       

Kannada Duniya

ಸದ್ಯದಲ್ಲೇ Yahoo ಯುಗಾಂತ್ಯ….

yahoo_campus_1484029507

ಸದ್ಯದಲ್ಲೇ Yahoo ಗೆ ಮರುನಾಮಕರಣವಾಗ್ತಾ ಇದೆ.  ಅಮೆರಿಕದ ವರಿಜೊನ್ ಗೆ ಮಾರಾಟವಾಗಿದ್ದೇ ಆದಲ್ಲಿ ಮುಂದಿನ ತಿಂಗಳು Yahoo ಹೆಸರು ‘Altaba Inc’ ಅಂತಾ ಬದಲಾಗಲಿದೆ. ಇಂಟರ್ನೆಟ್ ಯುಗದ ಪ್ರವರ್ತಕ ಅಂತಾನೇ ಕರೆಸಿಕೊಂಡಿದ್ದ ಯಾಹೂ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಬಹಳ ದಿನಗಳಾಗಿವೆ. ಇದೀಗ ಯಾಹೂ ಅನ್ನೋ ಹೆಸರು ಕೂಡ ಅಳಿಸಿ ಹೋಗುವ ದಿನಗಳು ದೂರವಿಲ್ಲ.

4.83 ಬಿಲಿಯನ್ ಡಾಲರ್ ಕೊಟ್ಟು ‘ವರಿಜೊನ್’, ಯಾಹೂ ಕಂಪನಿಯನ್ನು ಕೊಂಡುಕೊಳ್ತಾ ಇದೆ. ಈ ಮಾರಾಟ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಯಾಹೂ ಕಂಪನಿಯ ಸಿಇಓ ಮರಿಸ್ಸಾ ಮೇಯರ್ ಕೂಡ ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ. ಯಾಹೂ ಹೆಸರನ್ನು ‘ಅಲ್ಟಾಬಾ’ ಎಂದು ಮರುನಾಮಕರಣ ಮಾಡುತ್ತಿರುವುದಕ್ಕೆ ಕಾರಣವೂ ಇಲ್ಲದಿಲ್ಲ. ಈ ಹೆಸರು ಅಲ್ಟರ್ನೇಟಿವ್ ಮತ್ತು ಅಲಿಬಾಬಾ ಎರಡರ ಸಮ್ಮಿಶ್ರಣ.

ವರಿಜೊನ್, ಯಾಹೂ ಕಂಪನಿಯ ಜಾಹೀರಾತು, ಇಮೇಲ್ ಮತ್ತು ಮೀಡಿಯಾ ಬ್ಯುಸಿನೆಸ್ ಅನ್ನು ಮಾತ್ರ ಕೊಂಡುಕೊಳ್ತಾ ಇದೆ. ಅಲಿಬಾಬಾ ಕಂಪನಿಯಲ್ಲಿ ಯಾಹೂ ಶೇ.15ರಷ್ಟು ಶೇರುಗಳನ್ನು ಹೊಂದಿರೋದ್ರಿಂದ ಅಲಿಬಾಬಾ ಹೆಸರನ್ನೂ ಸೇರಿಸಿ ಮರುನಾಮಕರಣ ಮಾಡಲಾಗ್ತಿದೆ. ಹಿಂದೊಮ್ಮೆ ಯಾಹೂ ಮೌಲ್ಯ 125-2000 ಬಿಲಿಯನ್ ಡಾಲರ್ ನಷ್ಟಿತ್ತು. ಅಲ್ಲಿ 12,000 ಉದ್ಯೋಗಿಗಳು ಕೆಲಸ ಮಾಡ್ತಾ ಇದ್ರು. ಆದ್ರೆ ಈಗ ಕೇವಲ 4.83 ಬಿಲಿಯನ್ ಡಾಲರ್ ಗೆ ಬಂದು ನಿಂತಿದೆ. ಇದೀಗ ಯಾಹೂ ಅನ್ನೋ ಹೆಸರೇ ಮರೆಯಾಗಿ ಹೋಗ್ತಾ ಇದೆ. ಗುಡ್ ಬೈ ಯಾಹೂ….

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...