alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಯ್ತು ವಿಮಾನ ದುರಂತದ ‘ರಹಸ್ಯ’

ಕಠ್ಮಂಡು: ಮಾರ್ಚ್ 12ರಂದು ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ನಡೆದ ವಿಮಾನ ಅಪಘಾತದ ರಹಸ್ಯ ಬಯಲಾಗಿದೆ.

ವಿಮಾನ ಚಲಾಯಿಸುತ್ತಿದ್ದ ವೇಳೆ ಪೈಲೆಟ್ ಭಾವನಾತ್ಮಕ ತಾಕಲಾಟಕ್ಕೆ ಸಿಲುಕಿ, ತನ್ನ ಮೇಲೆ ತಾನು ಅಪನಂಬಿಕೆ ಹೊಂದಿ ಒತ್ತಡ ಹೊಂದಿದ್ದೇ ಘಟನೆಗೆ ಕಾರಣ ಎಂದು ಅಂತಿಮ ತನಿಖಾ ವರದಿ ಸ್ಪಷ್ಟಪಡಿಸಿದೆ.

ಬಾಂಗ್ಲಾದಿಂದ ಹೊರಟಿದ್ದ ವಿಮಾನವು ಕಠ್ಮಂಡುವಿನಲ್ಲಿ ಇಳಿಯುವಾಗ ಅಪಘಾತವಾಗಿತ್ತು. ಇದರಿಂದ ವಿಮಾನದಲ್ಲಿದ್ದ 51 ಮಂದಿ ಸಜೀವ ದಹನವಾಗಿದ್ದರು. 20 ಮಂದಿ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದಿದ್ದರೂ ಗಂಭೀರ ಗಾಯಗೊಂಡಿದ್ದರು.

ವರದಿಯಲ್ಲಿ ಉಲ್ಲೇಖವಾಗಿರುವಂತೆ, ವಿಮಾನ ಹಾರಾಟವಾಗುತ್ತಿದ್ದ ಸಂದರ್ಭದಲ್ಲಿ ಪೈಲೆಟ್ ಕಣ್ಣೀರಿಟ್ಟಿದ್ದ. ಭಾವನಾತ್ಮಕವಾಗಿ ಕುಸಿತಗೊಂಡಿದ್ದ. ಈ ಬೆಳವಣಿಗೆಗೆ ಆತನ ಕೌಶಲ್ಯವನ್ನು ವಿಮಾನದ ಕ್ಯಾಪ್ಟನ್ ಪ್ರಶ್ನಿಸಿದ್ದರು. ಬಳಿಕ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಅಪಘಾತವಾಗಿದ್ದು, ಉರಿಯುವ ಜ್ವಾಲೆಯೊಂದಿಗೆ ವಿಮಾನ ನಿಲ್ದಾಣದಿಂದ ಫುಟ್ಬಾಲ್ ಅಂಗಳಕ್ಕೆ ಆ ವಿಮಾನವು ನುಗ್ಗಿತ್ತು.

ಯು.ಎಸ್. ಬಾಂಗ್ಲಾ ಏರ್ಲೈನ್ಸ್ ಕ್ಯಾಪ್ಟನ್ ತನ್ನ ಮಹಿಳಾ ಸಹೋದ್ಯೋಗಿ ಮಾತಿನಿಂದ ನೊಂದಿದ್ದ. ಇದರಿಂದ ಭಾವನಾತ್ಮಕವಾಗಿ ಕುಸಿದಿದ್ದ. ಕಾಕ್ ಪಿಟ್ನಲ್ಲಿ ಆತ ನಿರಂತರವಾಗಿ ಧೂಮಪಾನ ಮಾಡಿದ್ದ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ವಿಮಾನ ಹಾರಾಟ ಸಂದರ್ಭದಲ್ಲಿಯೇ ಕ್ಯಾಪ್ಟನ್ ಅಬೀದ್ ಸುಲ್ತಾನ್ ಅವರು ಅತ್ತಿದ್ದಾರೆ. ಜತೆಗೆ ವಿಮಾನ ರನ್ ವೇ ಸಮೀಪಿಸುತ್ತಿದ್ದಂತೆ ಕೊನೆ ಕ್ಷಣದಲ್ಲಿ ದಿಕ್ಕು ಬದಲಿಸಿದೆ. ಹಾಗೆಯೇ ಅದರ ವೇಗ ಕಡಿಮೆ ಮಾಡುವಲ್ಲಿ ಪ್ರಯತ್ನ ವಿಫಲವಾಗಿದೆ. ಲ್ಯಾಂಡಿಂಗ್ ಮಾಡುವಾಗ ಅಗತ್ಯ ಕ್ರಮಗಳನ್ನೂ ಕೈಗೊಂಡಿಲ್ಲ ಎಂದು ತನಿಖಾಧಿಕಾರಿಗಳು ಅಭಿಪ್ರಾಯ ನೀಡಿದ್ದಾರೆ.

ಅಪಘಾತ ನಡೆದಾಗ ಈ ಪ್ರಕರಣವು ಪೈಲೆಟ್ ಮತ್ತು ವಾಯುಯಾನ ಸಂಚಾರ ನಿಯಂತ್ರಕರ ಗೊಂದಲದಿಂದ ಉಂಟಾಗಿತ್ತೆಂದು ಪ್ರಾಥಮಿಕ ವರದಿ ಹೇಳಿದ್ದವು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...