alex Certify
ಕನ್ನಡ ದುನಿಯಾ       Mobile App
       

Kannada Duniya

ಅಳಿಲೊಂದಿಗೆ ವಿಮಾನ ಏರಲು ಬಂದಿದ್ದ ಮಹಿಳೆಯನ್ನು ಹೊರ ದಬ್ಬಿದ ಸಿಬ್ಬಂದಿ

ವಿಮಾನದಲ್ಲಿ ಅಳಿಲಿನ ಜತೆಯಲ್ಲಿ ಪ್ರಯಾಣಿಸಲು ಮುಂದಾದ ಮಹಿಳೆಯನ್ನು ವಿಮಾನದಿಂದ ಕೆಳಗಿಸಿರುವ ಘಟನೆ ಅಮೆರಿಕಾದ ಒರ್ ಲ್ಯಾಂಡೋದಲ್ಲಿ ನಡೆದಿದೆ.

ಮಂಗಳವಾರ ಈ ಘಟನೆ ನಡೆದಿದ್ದು, ಮಹಿಳೆಗೆ ತನ್ನೊಂದಿಗೆ ಕರೆತಂದಿದ್ದ ಅಳಿಲಿನೊಂದಿಗೆ ವಿಮಾನ ಪ್ರವೇಶಿಸಲು ಅವಕಾಶ ನೀಡದೇ ಕೆಳಗಿಸಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಮಹಿಳೆ ಈ ಹಿಂದೆಯೇ ಸಾಕು ಪ್ರಾಣಿಯನ್ನು ಕರೆದುಕೊಂಡು ಬರುವುದಾಗಿ ಮಾಹಿತಿ ನೀಡಿದ್ದರಿಂದ ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದಾಳೆ. ಅಂತಿಮವಾಗಿ ಪೊಲೀಸರ ನೆರವಿನಿಂದ ಮಹಿಳೆಯನ್ನು ವಿಮಾನದಿಂದ ಹೊರ ಹಾಕಲಾಗಿದೆ ಎಂದು ತಿಳಿದುಬಂದಿದೆ.

ಘಟನೆ ಬಗ್ಗೆ ಮಾಹಿತಿ ನೀಡಿರುವ ಫ್ರಂಟರ್ ವಿಮಾನ ಸಂಸ್ಥೆ, ವಿಮಾನದಲ್ಲಿ ನಾಯಿ ಹಾಗೂ ಬೆಕ್ಕಿನ ಪ್ರಯಾಣಕ್ಕೆ ಮಾತ್ರ ಅವಕಾಶವಿದೆ. ಆದರೆ ಮಹಿಳೆ ಅಳಿಲು ತರುವ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಆದ್ದರಿಂದ ಅನಿವಾರ್ಯವಾಗಿ ಕೆಳಗಿಸಬೇಕಾಯಿತು. ಅಳಿಲು ಸೇರಿದಂತೆ ಯಾವುದೇ ಪ್ರಾಣಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಮಹಿಳೆಯನ್ನು ಈ ರೀತಿ ವಿಮಾನದಿಂದ ಹೊರಕಳುಹಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದ್ದು, ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...