alex Certify
ಕನ್ನಡ ದುನಿಯಾ       Mobile App
       

Kannada Duniya

ಜೀವಾವಧಿ ಶಿಕ್ಷೆಗೊಳಗಾದ ಕೈದಿ ಮದುವೆಯಾಗಲಿದ್ದಾಳೆ 3 ಮಕ್ಕಳ ತಾಯಿ

ಬ್ರಿಟನ್ ನಲ್ಲಿ ವಾಸವಾಗಿರುವ ಮಹಿಳೆಯೊಬ್ಬಳು ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಮೆರಿಕಾ ಮೂಲಕ ಕೈದಿ ಜೊತೆ ಮದುವೆಯಾಗಲಿದ್ದಾಳಂತೆ. ಮಹಿಳೆ ಹೆಸರು ಎಮ್ಮಾ ಪಿಕೆಟ್. ಆಕೆ ಗೆಳೆಯನ ಹೆಸರು ಜಸ್ಟಿನ್ ಏರ್ಸ್ಕಿನ್. 33 ವರ್ಷದ ಮಹಿಳೆ 30 ವರ್ಷದ ಕೈದಿಯನ್ನು ಮದುವೆಯಾಗಲಿದ್ದಾಳಂತೆ.

ಜಸ್ಟಿನ್ ಜೈಲಿಗೆ ಹೋಗುವ ಮುನ್ನವೇ ಮಹಿಳೆ ಆತನಿಗೆ ಪರಿಚಯವಿರಲಿಲ್ಲ. ವಾಸ್ತವವಾಗಿ ಜೈಲು ಕೈದಿಗಳಿಗಾಗಿ ಮಾಡಿರುವ ವೆಬ್ ಸೈಟ್ ನಲ್ಲಿ ಜಸ್ಟಿನ್ ಪರಿಚಯವಾಗಿದೆ. ಎರಡು ಭೇಟಿ ನಂತ್ರ ಜಸ್ಟಿನ್ ಜೊತೆ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾಳೆ ಮಹಿಳೆ.

2006ರಲ್ಲಿ ಜಸ್ಟಿನ್ ಗೆ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿತ್ತು. ಕೊಲೆ ಆರೋಪದ ಮೇಲೆ ಜಸ್ಟಿನ್ ಜೈಲು ಸೇರಿದ್ದಾನೆ. ಆಗ ಆತನ ವಯಸ್ಸು ಕೇವಲ 18 ವರ್ಷ. ಮಹಿಳೆ ಜಸ್ಟಿನ್ ನನ್ನು ಜೈಲಿನಿಂದ ಬಿಡುಗಡೆಗೊಳಿಸಲು ಅರ್ಜಿ ಸಲ್ಲಿಸಲು ಮುಂದಾಗಿದ್ದಾಳೆ. ಮದುವೆ ನಂತ್ರ ಮೂರು ಮಕ್ಕಳ ಜೊತೆ ಅಮೆರಿಕಾದಲ್ಲಿ ನೆಲೆಸಲು ಮಹಿಳೆ ನಿರ್ಧರಿಸಿದ್ದಾಳೆ.

ಜೈಲಿನಲ್ಲಿರುವ ವ್ಯಕ್ತಿ ಕೆಟ್ಟವನಾಗಿರುತ್ತಾನೆ ಎನ್ನಲು ಸಾಧ್ಯವಿಲ್ಲ. ಜಸ್ಟಿನ್ ನನಗೆ ಪ್ರಪೋಸ್ ಮಾಡಿದ್ದ. ಅದಕ್ಕೆ ನಾನು ಒಪ್ಪಿಗೆ ನೀಡಿದೆ ಎಂದಿದ್ದಾಳೆ ಎಮ್ಮಾ. ಜೈಲಿನಲ್ಲಿಯೇ ರಿಂಗ್ ಬದಲಿಸಲು ಮುಂದಾಗಿದ್ದಾಳೆ ಎಮ್ಮಾ. ಆದ್ರೆ ಜಸ್ಟಿನ್ ಗೆ ಪೆರೋಲ್ ಸಿಗೋದು ಅನುಮಾನ ಎನ್ನುತ್ತಿದ್ದಾರೆ ವಕೀಲರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...