alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಭಿಣಿಯರ ವಯಾಗ್ರಾ ಸೇವನೆಯಿಂದ ಆಗಿದ್ದೇನು ಗೊತ್ತಾ…?

ಗರ್ಭಿಣಿ ಮಹಿಳೆಯರ ಮೇಲೆ ನಡೆದ ಔಷಧೀಯ ಪ್ರಯೋಗವೊಂದರ ಪರಿಣಾಮ 11 ಮಂದಿಯ ಗರ್ಭದಲ್ಲಿದ್ದ ಮಕ್ಕಳು ಮೃತಪಟ್ಟಿರುವ ಘಟನೆ ನೆದರ್ಲ್ಯಾಂಡ್ನಲ್ಲಿ ನಡೆದಿದೆ. ಇದರಿಂದಾಗಿ ವೈದ್ಯಾಧಿಕಾರಿಗಳು ನಡೆಸೋಕೆ ಉದ್ದೇಶಿಸಿದ್ದ ವೈದ್ಯಕೀಯ ಪ್ರಯೋಗವನ್ನೇ ರದ್ದುಗೊಳಿಸಿದ್ದಾರೆ. ಡಚ್ ಸರ್ಕಾರ ಈ ಘಟನೆಯನ್ನ ಗಂಭೀರವಾಗಿ ಪರಿಗಣಿಸಿದ್ದು ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ನೆದರ್ಲ್ಯಾಂಡ್ ನ ವಿವಿಧ ಆಸ್ಪತ್ರೆಗಳಲ್ಲಿನ 11 ಮಂದಿ ಮಹಿಳೆಯರ ಮೇಲೆ ನಡೆದ ವೈದ್ಯಕೀಯ ಪ್ರಯೋಗ ಕಹಿ ಘಟನೆಯೊಂದಿಗೆ ಅಂತ್ಯವಾಗಿದೆ. ಒಟ್ಟು 93 ಮಹಿಳೆಯರನ್ನ ಈ ವೈದ್ಯಕೀಯ ಪ್ರಯೋಗಕ್ಕೆ ಒಳಪಡಿಸಲಾಗಿತ್ತು. ಮಹಿಳೆಯರ ಗರ್ಭದಲ್ಲಿದ್ದ ಮಕ್ಕಳ ಬೆಳವಣಿಗೆ ಸರಿಯಾಗಿ ಆಗದ ಹಿನ್ನಲೆಯಲ್ಲಿ ವಯಾಗ್ರ ಮಾತ್ರೆಯನ್ನು ಅವರಿಗೆ ಸೇವಿಸುವಂತೆ ಸೂಚನೆ ನೀಡಲಾಗಿತ್ತು.

ಇದಕ್ಕೂ ಮೊದಲು ಇಲಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ ವಯಾಗ್ರಾ ಸೇವನೆಯಿಂದ ರಕ್ತ ಮತ್ತು ಆಮ್ಲಜನಕದ ಸರಾಗ ಸಂಚಾರವಾಗುತ್ತದೆ ಅನ್ನೋದನ್ನ ವೈದ್ಯರು ಪತ್ತೆಹಚ್ಚಿದ್ದರು. ಮನುಷ್ಯರ ಮೇಲೆ ಈ ಪ್ರಯೋಗ ನಡೆಸೋಕೆ ಆರಿಸಿಕೊಂಡಿದ್ದು ಗರ್ಭದಲ್ಲಿದ್ದ ಮಕ್ಕಳ ಬೆಳವಣಿಗೆ ಕುಂಠಿತವಾಗಿದ್ದ ಮಹಿಳೆಯರನ್ನ.

2015ರಲ್ಲಿ ಆರಂಭವಾದ ಈ ವೈದ್ಯಕೀಯ ಪರೀಕ್ಷೆ 2020 ಕ್ಕೆ ಅಂತ್ಯಗೊಳ್ಳುವ ನಿರೀಕ್ಷೆ ಇತ್ತು. ಇಲ್ಲಿವರೆಗೂ ಹಲವು ಹಂತಗಳಲ್ಲಿ ಸುಮಾರು 350 ಮಂದಿ ಈ ಪ್ರಯೋಗದ ಭಾಗವಾಗಿದ್ದಾರೆ. ಭ್ರೂಣದ ಬೆಳವಣಿಗೆ ಸರಿಯಾಗಿ ಆಗದ ಕಾರಣ ತಾಯಂದಿರು ಈ ಮಾತ್ರೆ ಸೇವಿಸೋಕೆ ವೈದ್ಯಾಧಿಕಾರಿಗಳು ಸೂಚಿಸಿದ್ದರು.

ಮಾತ್ರೆ ಸೇವಿಸಿದ ನಂತರದಲ್ಲಿ ಮಕ್ಕಳ ಶ್ವಾಸಕೋಶದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಉಸಿರಾಟದ ಸಮಸ್ಯೆಯೊಂದಿಗೆ ಗರ್ಭದಲ್ಲೇ ಮಕ್ಕಳು ಸಾವನ್ನಪ್ಪಿದ್ದಾರೆ. ಇಲ್ಲಿವರೆಗೂ 11 ಮಕ್ಕಳ ಸಾವು ಸಂಭವಿಸಿದ್ದು ಮಾತ್ರೆ ಸೇವಿಸಿದವರ ಪೈಕಿ ಉಳಿದವರ ಆರೋಗ್ಯ ಪರಿಸ್ಥಿತಿಯ ಬಗ್ಗೆ ಸಂಶೋಧನಾ ತಂಡ ನಿಗಾ ವಹಿಸಿದೆ. ಅವರನ್ನ ಆರೋಗ್ಯ ತಪಾಸಣೆಗೆ ಒಳಪಡಿಸಿದ್ದು ಮಕ್ಕಳಿಗೆ ಏನಾದ್ರು ತೊಂದರೆ ಆಗಿದೆಯಾ ಅನ್ನೋದನ್ನ ತಿಳಿದುಕೊಳ್ಳುವ ಕಾರ್ಯದಲ್ಲಿ ಸಂಶೋಧನಾ ತಂಡ ನಿರತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...