alex Certify
ಕನ್ನಡ ದುನಿಯಾ       Mobile App
       

Kannada Duniya

‘ಮೆಟ್ರೋ’ ಪ್ರಯಾಣಿಕರನ್ನು ಬೆಚ್ಚಿ ಬೀಳಿಸುತ್ತೆ ಈ ಸ್ಟೋರಿ

ಲಂಡನ್‌: ಮೆಟ್ರೋ ಟ್ರೈನ್ ಒಂದು 75 ವರ್ಷದ ಹಿರಿಯ ಮಹಿಳೆಯೋರ್ವರನ್ನು 90 ಮೀಟರ್‌ ದೂರಕ್ಕೆ ಎಳೆದೊಯ್ದು, ಸುರಂಗದೊಳಕ್ಕೆ ಸಾಗಿದ ಘಟನೆ ಲಂಡನ್‌ನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಶೆಫರ್ಡ್‌ ಬುಷ್‌ ಮೆಟ್ರೋ ನಿಲ್ದಾಣದಲ್ಲಿ ಈ ಮಹಿಳೆ ಇಳಿದಿದ್ದಾರೆ. 23 ಸೆಕೆಂಡುಗಳ ಬಳಿಕ ಬಾಗಿಲು ಮುಚ್ಚಿಕೊಂಡಿದ್ದು, ಈ ವೇಳೆ ಆಕೆಯ ಹ್ಯಾಂಡ್‌ ಬ್ಯಾಗ್‌ ಬಾಗಿಲಿಗೆ ಸಿಲುಕಿಕೊಂಡಿದೆ. ಮೆಟ್ರೋ ಚಾಲಕ ಸಿಸಿ ಟಿವಿಯನ್ನು ಗಮನಿಸದೇ, ಚಲಾವಣೆ ಮಾಡಿದ್ದರ ಪರಿಣಾಮ ಪ್ಲಾಟ್‌ಫಾರಂನಲ್ಲಿ 75 ಮೀ. ಹಾಗೂ 15 ಮೀ.ನಷ್ಟು ಸುರಂಗ ಮಾರ್ಗದಲ್ಲಿ ಮಹಿಳೆಯನ್ನು ಎಳೆದುಕೊಂಡು ಹೋಗಿದೆ.

ಕಳೆದ ಒಂದು ತಿಂಗಳಿನಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಗೆ ವಿವಿಧ ಭಾಗಗಳಲ್ಲಿ ಮೂಳೆ ಮುರಿತ ಉಂಟಾಗಿದೆ.

ಸಾಮಾನ್ಯವಾಗಿ ಬಾಗಿಲು ಸರಿಯಾಗಿ ಮುಚ್ಚದೇ ಟ್ರೇನ್‌ ಮುಂದಕ್ಕೆ ಸಾಗದು. ಆದರೆ ಈ ಸಮಯದಲ್ಲಿ ಸುರಕ್ಷತಾ ತಂತ್ರಜ್ಞಾನ ಸರಿಯಾಗಿ ಕೆಲಸ ಮಾಡಿಲ್ಲ. 1999 ರಿಂದ ಮೆಟ್ರೋ ಓಡಿಸುತ್ತಿದ್ದ ಚಾಲಕನ ಮೇಲೆ ಈವರೆಗೆ ಒಂದೇ ಒಂದು ದೂರು ದಾಖಲಾಗಿರಲಿಲ್ಲ. ಈ ದೃಶ್ಯ ಪೂರ್ತಿ ಸಿಸಿ ಟಿವಿಯಲ್ಲಿ ದಾಖಲಾಗಿರುವುದರಿಂದ ಪರಿಶೀಲನೆ ನಡೆಸಿದ ಪೊಲೀಸರು, ಯಾವುದೇ ರೀತಿಯ ಪ್ರಕರಣ ದಾಖಲಿಸಿಕೊಂಡಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...