alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರೀ ಬೆಲೆಗೆ ಹರಾಜಾಗಿದೆ ಐನ್‌ಸ್ಟೀನ್‌ ಕೈ ಬರಹದ ಪತ್ರ

ನೋಬೆಲ್‌ ಪ್ರಶಸ್ತಿ ವಿಜೇತ ವಿಜ್ಞಾನಿ ಅಲ್ಬರ್ಟ್‌ ಐನ್‌ಸ್ಟೇನ್‌ 1928ರಲ್ಲಿ ಬರೆದ ಪತ್ರವೊಂದು 18 ಸಾವಿರ ಡಾಲರ್‌ಗೆ ಹರಾಜಾಗಿದೆ. ಐನ್‌ಸ್ಟೇನ್‌ ಕೈ ಬರಹ ಹಾಗೂ ಸಹಿ ಇರುವ ಪತ್ರದಲ್ಲಿ ಡಾ. ಹನ್ಸ್‌ರಿಚನ್‌ಬಕ್‌ ಅವರನ್ನು ಟೀ ಗೆ ಕರೆದಿದ್ದಾರೆ.

1928, ಅಕ್ಟೋಬರ್‌ 19ರ ದಿನಾಂಕವಿರುವ ಪತ್ರದಲ್ಲಿ, ಥಿಯೆರಿ ಆಫ್‌ ರಿಲೇಟಿವಿಟಿಯಲ್ಲಿ ತಮ್ಮೊಂದಿಗೆ ಕೆಲಸ ಮಾಡುತ್ತಿದ್ದ ಹನ್ಸ್‌ರಿಚನ್‌ ಹಾಗೂ ಪತ್ನಿಯನ್ನು ತಮ್ಮೊಂದಿಗೆ ಚಹಾ ಕುಡಿಯಲು ಬರುವಂತೆ ಆಹ್ವಾನಿಸಿದ್ದಾರೆ.

ಈ ಸಮಯದಲ್ಲಿ ಬರ್ಲಿನ್‌ನ ಹಂಬೋಲ್ಟ್‌ ವಿಶ್ವವಿದ್ಯಾಲಯದಲ್ಲಿ ಐನ್‌ಸ್ಟೀನ್‌, ರಿಚನ್‌ಬಕ್‌ ಹಾಗೂ ಆಸ್ಟ್ರೇಲಿಯಾದ ಭೌತವಿಜ್ಞಾನಿ ಎರ್ವಿನ್‌ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು.

ಈ ಪತ್ರ ಜರ್ಮನ್‌ ಭಾಷೆಯಲ್ಲಿದ್ದು, 18 ಸಾವಿರ ಡಾಲರ್‌ಗೆ ಹರಾಜು ಆಗಿರುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ. ನನ್ನ ಸಿದ್ದಾಂತಗಳ ಬಗ್ಗೆ ನೀವು ನೀಡುವ ತಾರ್ಕಿಕ ಪ್ರಸ್ತುತಿಯನ್ನು ವಾಸ್ತವ ಎಂದು ಭಾವಿಸುತ್ತೇನೆ. ಆದರೆ ಇದು ಸರಳ ಅಲ್ಲ ಎಂದು ಐನ್‌ಸ್ಟೀನ್‌ ಪತ್ರದಲ್ಲಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...