alex Certify
ಕನ್ನಡ ದುನಿಯಾ       Mobile App
       

Kannada Duniya

ಜಗತ್ತಿನಲ್ಲಿರುವ ಅರ್ಧ ಸಂಪತ್ತಿಗೆ ಇವರೇ ಒಡೆಯರು….

zuckerberg-and-bill-gates

ವಿಶ್ವದ ಒಟ್ಟಾರೆ ಸಂಪತ್ತಿನಲ್ಲಿ ಅರ್ಧದಷ್ಟು 8 ಜನರ ಬಳಿ ಇದೆಯಂತೆ. ವಿಶ್ವ ಆರ್ಥಿಕ ವೇದಿಕೆ ಉದ್ಘಾಟನಾ ಸಮಾರಂಭದಲ್ಲಿ ಒಕ್ಸ್ ಫಾಮ್ ಈ ವಿಷಯ ಬಹಿರಂಗಪಡಿಸಿದೆ. ಈ ಅಸಮಾನತೆ ಸಮಾಜವನ್ನು ಇಬ್ಭಾಗ ಮಾಡುವ ಭೀತಿ ಕಾಡುತ್ತಿದೆ ಅಂತಾ ಒಕ್ಸ್ ಫಾಮ್ ಅಭಿಪ್ರಾಯಪಟ್ಟಿದೆ.

ಜಗತ್ತಿನ ಕಡುಬಡವರಾದ 3.6 ಬಿಲಿಯನ್ ಜನರ ಬಳಿಯಿರುವ ಒಟ್ಟಾರೆ ಆಸ್ತಿ 8 ಉದ್ಯಮಿಗಳ ಆಸ್ತಿಗೆ ಸರಿಸಮನಾಗಿದೆ. ಅವರಲ್ಲಿ 6 ಮಂದಿ ಅಮೆರಿಕದ ಉದ್ಯಮಿಗಳು, ಸ್ಪೇನ್ ಹಾಗೂ ಮೆಕ್ಸಿಕೋದ ತಲಾ ಒಬ್ಬೊಬ್ಬರು ಉದ್ಯಮಿಗಳಿದ್ದಾರೆ. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ಫೇಸ್ಬುಕ್ ನ ಮಾರ್ಕ್ ಜುಕರ್ಬರ್ಗ್, ಅಮೆಜಾನ್ ನ ಜೆಫ್ ಬೆಜೋಸ್ ಕೂಡ ಸೇರಿದ್ದಾರೆ.

ಹೆಚ್ಚುತ್ತಿರುವ ಜನಾಂಗೀಯ ನಿಂದನೆಯನ್ನು ಶ್ರೀಮಂತ ರಾಷ್ಟ್ರಗಳು ಇನ್ನು ಸಹಿಸಲು ಸಾಧ್ಯವಿಲ್ಲ ಅಂತಾ ಒಕ್ಸ್ ಫಾಮ್ ತನ್ನ ವರದಿಯಲ್ಲಿ ಪ್ರಕಟಿಸಿದೆ. ವರ್ಷದ ಹಿಂದಷ್ಟೆ ಜಗತ್ತಿನ ಒಟ್ಟಾರೆ ಆಸ್ತಿಯ ಅರ್ಧಪಾಲು 62 ಜನರ ಬಳಿಯಿತ್ತು. ಆದ್ರೀಗ ಕೇವಲ 8 ಮಂದಿಯ ಬಳಿಯಿದೆ. ಇದನ್ನು ಸರಿದೂಗಿಸಲು ಶ್ರೀಮಂತರಿಗೆ ತೆರಿಗೆ ಹೇರುವಂತೆ ಒಕ್ಸ್ ಫಾಮ್ ಒತ್ತಾಯಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...