alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಸಿಗರ ಸಂಖ್ಯೆ ಹೆಚ್ಚಿಸಲು ಕತ್ತೆಗೆ ಬಣ್ಣ ಬಳಿದ್ರು…!

ಈಜಿಪ್ಟ್ ನ ರಾಜಧಾನಿ ಕೈರೋದ ಮೃಗಾಲಯವೊಂದರ ಸಿಬ್ಬಂದಿ ಮಾಡಿದ ಕೆಲಸ ನಗೆಪಾಟಲಿಗೆ ಗುರಿಯಾಗಿದೆ. ಮೃಗಾಲಯದ ಸಿಬ್ಬಂದಿ ಪ್ರವಾಸಿಗರನ್ನು ಸೆಳೆಯಲು ಕತ್ತೆಗೆ ಬಣ್ಣ ಬಳಿದಿದ್ದಾರೆ. ಕತ್ತೆಗೆ ಬಣ್ಣ ಬಳಿದು ಜೀಬ್ರಾ ರೂಪ ನೀಡಿದ್ದಾರೆ. ಇದನ್ನು ವಿದ್ಯಾರ್ಥಿಯೊಬ್ಬ ಪತ್ತೆ ಹಚ್ಚಿದ್ದಾನೆ. ವಿದ್ಯಾರ್ಥಿ ಜೀಬ್ರಾದಂತೆ ಕಾಣುವ ಕತ್ತೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾನೆ.

ಇಂಟರ್ನ್ಯಾಷನಲ್ ಗಾರ್ಡನ್ ಪಾರ್ಕ್ ಆಡಳಿತ ಮಂಡಳಿ ಈಗ ಮುಜುಗರಕ್ಕೀಡಾಗಿದೆ. ಕೈರೋದ ನಿವಾಸಿ ಮಹಮೂದ್ –ಇ-ಸರಾಹನಿ ಎಂಬ ವಿದ್ಯಾರ್ಥಿ ಪಾರ್ಕಿಗೆ ಹೋಗಿದ್ದಾನೆ. ಅಲ್ಲಿ ಕಪ್ಪು-ಬಿಳಿ ಬಣ್ಣದ ಪ್ರಾಣಿಯನ್ನು ನೋಡಿದ್ದಾನೆ. ಅನೇಕರು ಇದನ್ನು ಜೀಬ್ರಾ ಎಂದುಕೊಂಡಿದ್ದರಂತೆ. ಅದ್ರ ದೊಡ್ಡ ಕಿವಿ ಹಾಗೂ ವರ್ತನೆ ನೋಡಿ ಸಂದೇಹ ವ್ಯಕ್ತಪಡಿಸಿದ್ದ ವಿದ್ಯಾರ್ಥಿಗೆ ಕೆಲವೇ ನಿಮಿಷದಲ್ಲಿ ಸತ್ಯ ಗೊತ್ತಾಗಿದೆ.

ಕತ್ತೆಯ ಫೋಟೋ ತೆಗೆದು ಫೇಸ್ಬುಕ್ ಗೆ ಹಾಕಿದ ವಿದ್ಯಾರ್ಥಿ,ಇಂಥ ವಿಚಿತ್ರ ಪ್ರಾಣಿಯನ್ನು ನಾನು ಎಲ್ಲೂ ನೋಡಿಲ್ಲ. ಕತ್ತೆಗೆ ಬಣ್ಣ ಬಳಿದು ಜೀಬ್ರಾ ಮಾಡಲಾಗಿದೆ ಎಂದು ಪೋಸ್ಟ್ ಹಾಕಿದ್ದಾನೆ. ಅನೇಕ ತಜ್ಞರು ಕೂಡ ಇದು ಕತ್ತೆ ಎನ್ನುತ್ತಿದ್ದಾರೆ. ಆದ್ರೆ ಮೃಗಾಲಯದ ಆಡಳಿತ ಮಂಡಳಿ ಮಾತ್ರ ಸತ್ಯ ಒಪ್ಪಿಕೊಳ್ಳಲು ಸಿದ್ಧವಿಲ್ಲ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...