alex Certify
ಕನ್ನಡ ದುನಿಯಾ       Mobile App
       

Kannada Duniya

ಗಂಡಂದಿರಿಗೆ ಹೊಡೆಯುವುದರಲ್ಲಿ ಎತ್ತಿದ ಕೈ ಈ ಮಹಿಳೆಯರು

victim_2776ಗಂಡ- ಹೆಂಡತಿ ಜಗಳಕ್ಕೆ ಕೊನೆ ಎಂಬುದೇ ಇಲ್ಲ. ಹಿಂದೆಲ್ಲಾ ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂದು ಹೇಳಲಾಗುತ್ತಿತ್ತು. ಈಗಂತೂ ನಿತ್ಯವೂ ಜಗಳವೇ. ಹೀಗೆ ಜಗಳದ ಸಂದರ್ಭದಲ್ಲಿ ಆಕ್ರೋಶದಿಂದ ಗಂಡಸರು ಹೊಡೆಯುವುದೇ ಜಾಸ್ತಿ. ಆದರೆ ಈಜಿಪ್ಟ್ ನಲ್ಲಿ ಮಾತ್ರ ಇದಕ್ಕೆ ತದ್ವಿರುದ್ಧವಾಗಿದೆ.

ಹೌದು, ಈಜಿಪ್ಟ್ ಮಹಿಳೆಯರು ತಮ್ಮ ಗಂಡನ ಮೇಲೆ ಹಲ್ಲೆ ನಡೆಸುವುದರಲ್ಲಿ ಎತ್ತಿದ ಕೈ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.  ಈಜಿಪ್ಟ್ ನ ಶೇ. 28ರಷ್ಟು ಮಹಿಳೆಯರು, ತಮ್ಮ ಗಂಡನ ಮೇಲೆ ದೈಹಿಕ ಹಲ್ಲೆ ನಡೆಸಿ, ಮಾನಸಿಕ ಕಿರುಕುಳ ನೀಡುತ್ತಾರೆಂದು ಹೇಳಲಾಗಿದೆ. ಅಮೆರಿಕದ ಶೇ. 23ರಷ್ಟು ಹೆಂಡತಿಯರು, ಗಂಡಸರ ಮೇಲೆ ಹಲ್ಲೆ ನಡೆಸುತ್ತಾರೆ ಎನ್ನಲಾಗಿದೆ.

ಅದೇ ರೀತಿ, ಯುನೈಟೆಡ್ ಕಿಂಗ್ ಡಮ್ ನಲ್ಲಿ ಶೇ. 17 ರಷ್ಟು ಹಾಗೂ ಭಾರತದ ಶೇ. 11ರಷ್ಟು ಮಹಿಳೆಯರು ಗಂಡಂದಿರ ಮೇಲೆ ತಮ್ಮ ಪ್ರತಾಪ ತೋರುತ್ತಾರೆ. ತಮ್ಮ ಪತಿಯ ಮೇಲೆ ಹಲ್ಲೆ ನಡೆಸಲು ಮಹಿಳೆಯರು ಚಪ್ಪಲಿ, ಚೂಪಾದ ಆಯುಧ, ಪಾತ್ರೆಗಳು, ಬೆಲ್ಟ್ ಗಳನ್ನು ಬಳಸುತ್ತಾರೆ ಎನ್ನಲಾಗಿದೆ.

ಈಜಿಪ್ಟ್ ಮಹಿಳೆಯರು ಮಾತ್ರ ಹೆಚ್ಚಾಗಿ ಗಂಡಂದಿರ ಮೇಲೆ ಹಲ್ಲೆ ನಡೆಸುತ್ತಾರೆ ಎಂದುಕೊಳ್ಳಬೇಡಿ. ಶೇ. 47ರಷ್ಟು ಮಂದಿ ಈಜಿಪ್ಟ್ ಮಹಿಳೆಯರು, ತಮ್ಮ ಗಂಡಂದಿರಿಂದ ಹಿಂಸೆಗೊಳಗಾಗುತ್ತಾರೆ ಎಂಬ ಮಾಹಿತಿ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಇದೇ ರೀತಿ ಇತರೆ ದೇಶಗಳಲ್ಲೂ ಇದೇ ಪರಿಸ್ಥಿತಿ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...