alex Certify
ಕನ್ನಡ ದುನಿಯಾ       Mobile App
       

Kannada Duniya

ಅಪಹೃತ ವಿಮಾನದಲ್ಲಿದ್ದ ಬಹುತೇಕ ಮಂದಿ ಬಿಡುಗಡೆ

hijack flight

ಅಲೆಕ್ಸಾಂಡ್ರಿಯಾದಿಂದ ಕೈರೋಗೆ ತೆರಳುತ್ತಿದ್ದ ಈಜಿಪ್ಟ್ ಏರ್ ವಿಮಾನ ಸಂಸ್ಥೆಗೆ ಸೇರಿದ ವಿಮಾನವನ್ನು ಅಪಹರಣ ಮಾಡಿದ್ದ ವ್ಯಕ್ತಿ, ನಾಲ್ವರು ವಿದೇಶಿ ಪ್ರಯಾಣಿಕರು ಹಾಗೂ ವಿಮಾನ ಸಿಬ್ಬಂದಿಯನ್ನು ಹೊರತುಪಡಿಸಿ ಉಳಿದೆಲ್ಲರನ್ನು ಬಿಡುಗಡೆ ಮಾಡಿದ್ದಾನೆ.

ವಿಮಾನದಲ್ಲಿ 55 ಮಂದಿ ಪ್ರಯಾಣಿಕರು ಹಾಗೂ 7 ಮಂದಿ ವಿಮಾನ ಸಿಬ್ಬಂದಿ ಸೇರಿದಂತೆ ಒಟ್ಟು 62 ಮಂದಿ ಪ್ರಯಾಣಿಸುತ್ತಿದ್ದು, ಸೊಂಟಕ್ಕೆ ಬಾಂಬ್ ಕಟ್ಟಿಕೊಂಡಿದ್ದ ವ್ಯಕ್ತಿಯೊಬ್ಬ ಈ ಕೃತ್ಯವೆಸಗಿದ್ದ. ವೈಯಕ್ತಿಕ ಕಾರಣಗಳಿಗಾಗಿ ಈ ವಿಮಾನವನ್ನು ಅಪಹರಿಸಲಾಗಿದೆ ಎನ್ನಲಾಗಿದ್ದು, ಈಜಿಪ್ಟ್ ನಾಗರಿಕನಾಗಿರುವ ಇಬ್ರಾಹಿಂ ಸಬಾ, ಅದನ್ನು ಸೈಪ್ರಸ್ ನ ಲಾನಾರ್ಕಾ ವಿಮಾನ ನಿಲ್ದಾಣದಲ್ಲಿ ಬಲವಂತವಾಗಿ ಇಳಿಸಿದ್ದ. ಸೈಪ್ರಸ್ ನಲ್ಲಿ ತನಗೆ ಆಶ್ರಯ ನೀಡುವಂತೆ ಬೇಡಿಕೆ ಇಟ್ಟಿದ್ದಾನೆಂದು ಹೇಳಲಾಗಿದೆ.

ಬಿಡುಗಡೆಗೊಂಡ ಪ್ರಯಾಣಿಕರು ವಿಮಾನದಿಂದ ಹೊರ ಬಂದ ವೇಳೆ ಅವರುಗಳನ್ನು ಬಸ್ ನಲ್ಲಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಈ ಮಧ್ಯೆ ಸೈಪ್ರಸ್ ನ ಲಾನಾರ್ಕಾ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದ್ದು, ಇಲ್ಲಿ ಬಂದಿಳಿಯಬೇಕಿದ್ದ ವಿಮಾನಗಳನ್ನು ಇತರೆ ನಿಲ್ದಾಣಗಳಿಗೆ ಸ್ಥಳಾಂತರಿಸಲಾಗಿದೆ. ಅಪಹರಣಕಾರನ ಜೊತೆ ಮಾತುಕತೆ ನಡೆಸಲಾಗುತ್ತಿದ್ದು, ಉಳಿದವರೂ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...