alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಾಗಿ 40 ದಿನಗಳಲ್ಲೇ ವಿಚ್ಛೇದನ, ಕಾರಣ ಕೇಳಿದ್ರೆ…!

ಈಜಿಪ್ಟ್ ನಲ್ಲಿ ನವ ವಧುವೊಬ್ಬಳು ಪತಿಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದಾಳೆ. ಅವರಿಬ್ಬರ ಮದುವೆಯಾಗಿ ಕೇವಲ 40 ದಿನಗಳು ಕಳೆದಿವೆ. ಪತಿ ಹುರಿದ ಮಾಂಸ ಖರೀದಿಸಲು ನಿರಾಕರಿಸಿದ್ದಾನೆ ಅನ್ನೋ ಕಾರಣಕ್ಕೆ ಅವನಿಂದ ವಿಚ್ಛೇದನ ಪಡೆಯುತ್ತಿದ್ದಾಳೆ.

ಅವರದ್ದು ಪಕ್ಕಾ ಅರೇಂಜ್ಡ್ ಮ್ಯಾರೇಜ್. ಮದುವೆಗೂ 2 ವಾರಗಳ ಮುನ್ನ ಪರಸ್ಪರ ಪರಿಚಯವಾಗಿತ್ತಷ್ಟೆ. ಆತ ಇಷ್ಟೊಂದು ಜಿಪುಣ ಅನ್ನೋದು ಗೊತ್ತಿರಲಿಲ್ಲ ಅಂತಾ ಮಹಿಳೆ ಅಲವತ್ತುಕೊಳ್ತಿದ್ದಾಳೆ. ಅಷ್ಟೇ ಅಲ್ಲ ಹೊರಗೆ ಸುತ್ತಾಡುವುದು ನನಗೆ ಇಷ್ಟವಿಲ್ಲ, ಸುಮ್ಮನೇ ಹಣ ವೇಸ್ಟ್ ಎನ್ನುತ್ತಾನಂತೆ ಪತಿರಾಯ.

ಪತ್ನಿಯ ಹಠಕ್ಕೆ ಮಣಿದು ಒಮ್ಮೆ ಅವಳನ್ನು ಆತ ಹೊರಕ್ಕೆ ಕರೆದೊಯ್ದಿದ್ದಾನಂತೆ. ಆಗ ಸ್ವಲ್ಪ ಹುರಿದ ಮಾಂಸ ಖರೀದಿಸೋಣ ಅಂತಾ ಪತ್ನಿ ಕೇಳಿದ್ದಾಳೆ. ಈಗಾಗ್ಲೇ ನಿನಗೆ ಜ್ಯೂಸ್ ಕೊಡಿಸಿದ್ದೇನೆ, ಮತ್ತೆ ಹುರಿದ ಮಾಂಸ ಬೇಡ ಅಂತಾ ಖಡಾಖಂಡಿತವಾಗಿ ಹೇಳಿಬಿಟ್ಟಿದ್ದಾನೆ. ಈ ಘಟನೆ ಬಳಿಕ ತವರಿಗೆ ತೆರಳಿರೋ ಆಕೆ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...