alex Certify
ಕನ್ನಡ ದುನಿಯಾ       Mobile App
       

Kannada Duniya

2013 ರ ಈಜಿಪ್ಟ್ ಪ್ರತಿಭಟನೆ: 75 ಮಂದಿಗೆ ಗಲ್ಲು, 46 ಜನರಿಗೆ ಜೀವಾವಧಿ

2013 ರಲ್ಲಿ ಈಜಿಪ್ಟ್ ನಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ ಆರೋಪದಡಿ ಮುಸ್ಲಿಂ ಬ್ರದರ್ ಹುಡ್ ಸಂಘಟನೆಯ 75 ಮಂದಿಗೆ ಶನಿವಾರ ಈಜಿಪ್ಟ್ ನ್ಯಾಯಾಲಯ ಮರಣದಂಡನೆ ವಿಧಿಸಿದೆ.

ಮುಸ್ಲಿ ಬ್ರದರ್ ಹುಡ್ ಮುಖಂಡ ಮೊಹಮ್ಮದ್ ಮುರ್ಸಿಯನ್ನು ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿದ್ದಕ್ಕೆ ಬ್ರದರ್ ಹುಡ್ ಸಂಘಟನೆ 2013ರಲ್ಲಿ ಪ್ರತಿಭಟನೆ ನಡೆಸಿತ್ತು. ಈ ಪ್ರತಿಭಟನೆ ಹಿಂಸಾರೂಪ ಪಡೆದ ಪರಿಣಾಮ 600 ಜನ ಸಾವನ್ನಪ್ಪಿದ್ದರು.

ಪ್ರತಿಭಟನಾಕಾರರ ವಿರುದ್ಧ ಸಂಪನ್ಮೂಲ ಹಾನಿ ಮಾಡಿದ ಆರೋಪ ಹೇರಲಾಗಿತ್ತು. ಈ ಪ್ರಕರಣದ ತೀರ್ಪು ಶನಿವಾರ ಪ್ರಕರಟಗೊಂಡಿದೆ. 75 ಜನರಿಗೆ ಮರಣ ದಂಡನೆ, ಮೊಹಮ್ಮದ್ ಸೇರಿದಂತೆ 46 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪತ್ರಿಕಾ ಛಾಯಾಗ್ರಾಹಕ ಮೊಹಮ್ಮದ್ ಅಬೂ ಝಾಯಿದ್ 5 ವರ್ಷ ಜೈಲು ಶಿಕ್ಷೆ ಎದುರಿಸಲಿದ್ದಾರೆ.

2012ರಲ್ಲಿ ನಡೆದ ಚುನಾವಣೆಯಲ್ಲಿ ಬ್ರದರ್ ಹುಡ್ ನಾಯಕ ಮೊಹಮ್ಮದ್ ಮರ್ಸಿ ಈಜಿಪ್ಟ್ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಆದ್ರೆ ಒಂದು ವರ್ಷದ ಬಳಿಕ ಮರ್ಸಿರನ್ನು ಪದಚ್ಯುತಿಗೊಳಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...