alex Certify
ಕನ್ನಡ ದುನಿಯಾ       Mobile App
       

Kannada Duniya

12 ವರ್ಷದ ಬಾಲಕನಿಗೆ 11 ವರ್ಷದ ಸಹೋದರಿ ಮೇಲಾಯ್ತು ಲವ್, ಆಮೇಲೆ?

boy

ಈಜಿಪ್ಟ್ ನ ರಾಜಧಾನಿ ಕೈರೋದಲ್ಲಿ ಬಾಲಕನೊಬ್ಬನಿಗೆ ನಿಶ್ಚಿತಾರ್ಥವಾಗಿರುವ ಘಟನೆ ಬೆಳಕಿಗೆ ಬಂದಿದೆ. 12 ವರ್ಷದ ಉಮರ್ ನಿಶ್ಚಿತಾರ್ಥ 11 ವರ್ಷದ ಸಹೋದರಿ ಚಚೇರಿ ಜೊತೆ ನಡೆದಿದೆ. ಇವರಿಬ್ಬರು ಪ್ರೀತಿ ಮಾಡ್ತಿದ್ದಾರೆ ಎನ್ನಲಾಗಿದೆ.

ವಾಸ್ತವವಾಗಿ ಉಮರ್ ತಂದೆ ನಾಸಿರ್ ನ ಮೊದಲನೆ ಮಗನ ಮದುವೆ ಸಂದರ್ಭದಲ್ಲಿ ಉಮರ್ ಹಾಗೂ ಚಚೇರಿ ನಿಶ್ಚಿತಾರ್ಥ ಮಾಡಲಾಗಿದೆ. ಈ ಫೋಟೋ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದೆ. ಇಬ್ಬರು ಮಕ್ಕಳು ಒಬ್ಬರನ್ನೊಬ್ಬರು ಪ್ರೀತಿಸ್ತಿದ್ದಾರಂತೆ. ನಿಶ್ಚಿತಾರ್ಥ ಮಾಡಿಕೊಳ್ಳಲು ಬಯಸಿದ್ದರಂತೆ. ಹಾಗಾಗಿ ಎಂಗೇಜ್ ಮೆಂಟ್ ಮಾಡಿದ್ದಾಗಿ ತಂದೆ ನಾಸಿರ್ ಹೇಳಿದ್ದಾನೆ.

ಈಜಿಪ್ಟ್ ನಲ್ಲಿ 18 ವರ್ಷದೊಳಗೆ ಮದುವೆ ಮಾಡಿಕೊಳ್ಳುವುದು ಕಾನೂನು ಬಾಹಿರ. ಮಕ್ಕಳ ನಿಶ್ಚಿತಾರ್ಥ ನಡೆದಿರುವುದು ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಮಕ್ಕಳಿಗೆ ರಕ್ಷಣೆ ನೀಡಬೇಕು, ಪಾಲಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಮಾತುಗಳು ಕೇಳಿ ಬಂದಿವೆ. ಆದ್ರೆ ನಾಸಿರ್ ಆರೋಪವನ್ನು ತಳ್ಳಿ ಹಾಕಿದ್ದಾನೆ. ಈಗ ನಡೆದಿರುವುದು ನಿಶ್ಚಿತಾರ್ಥವಷ್ಟೆ. ಮದುವೆ 18 ವರ್ಷ ತುಂಬಿದ ಮೇಲೆ ನಡೆಯಲಿದೆ ಎಂದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...