alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಟ್ಟೆ ಪ್ರಿಯರಿಗೆ ಶಾಕಿಂಗ್ ನ್ಯೂಸ್

egg

ಮೊಟ್ಟೆಯನ್ನು ಇಷ್ಟಪಟ್ಟು ತಿನ್ನುವವರು ಈ ಸುದ್ದಿ ಓದಲೇಬೇಕು. ಇತ್ತೀಚೆಗಷ್ಟೆ ಕೋಳಿ ಮೊಟ್ಟೆಗಳಲ್ಲಿ ಅಪಾಯಕಾರಿ ಕೀಟನಾಶಕಗಳು ಪತ್ತೆಯಾಗಿವೆ. ಅವು ಮಾನವನ ದೇಹಕ್ಕೆ ಮಾರಕವಾಗಬಲ್ಲವು. ಯುರೋಪಿಯನ್ ಮಾರುಕಟ್ಟೆಗಳಲ್ಲಿ ಬಿಕರಿಯಾಗುತ್ತಿರುವ ಮೊಟ್ಟೆಗಳಲ್ಲಿ ಫಿಪ್ರೋನಿಲ್ ಎಂಬ ಅತ್ಯಂತ ವಿಷಯುಕ್ತ ರಾಸಾಯನಿಕ ಪತ್ತೆಯಾಗಿದೆ.

ಸುಮಾರು 15 ದೇಶಗಳಲ್ಲಿ ಇಂತಹ ಕ್ರಿಮಿನಾಶಕಯುಕ್ತ ಮೊಟ್ಟೆಗಳು ಮಾರಾಟವಾಗುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಜರ್ಮನಿಯ ಸೂಪರ್ ಮಾರ್ಕೆಟ್ ಗಳು ಖರೀದಿಸಿದ್ದ ಮೊಟ್ಟೆಗಳನ್ನು ಹಿಂತಿರುಗಿಸುವುದಾಗಿ ಪಟ್ಟು ಹಿಡಿದಿವೆ. ಅತ್ತ ನೆದರ್ಲೆಂಡ್ ನಲ್ಲಿ ಸೋಂಕು ಪೀಡಿತ ಕೋಳಿಗಳನ್ನೇ ಕೊಲ್ಲಲಾಗ್ತಿದೆ.

ಬೆಲ್ಜಿಯಂ, ಹಾಲೆಂಡ್, ಐರ್ಲೆಂಡ್, ಇಟಲಿ, ಪೋಲೆಂಡ್, ರೋಮಾನಿಯಾ, ಡೆನ್ಮಾರ್ಕ್, ಸ್ಲೋವೇನಿಯಾ, ಸ್ವೀಡನ್, ಸ್ಲೋವಾಕಿಯಾ, ಡಚ್, ಬ್ರಿಟನ್, ಆಸ್ಟ್ರಿಯಾದ ಮಾರುಕಟ್ಟೆಗಳಲ್ಲಿ ಕೂಡ ಕ್ರಿಮಿನಾಶಕವುಳ್ಳ ಮೊಟ್ಟೆಗಳನ್ನು ಮಾರಲಾಗ್ತಿದೆ. ಅಪ್ಪಿತಪ್ಪಿಯೂ ಈ ದೇಶಗಳಲ್ಲಿ ಮೊಟ್ಟೆ ಅಥವಾ ಮೊಟ್ಟೆಯ ಖಾದ್ಯಗಳನ್ನು ತಿನ್ನಬೇಡಿ.

ಮೊಟ್ಟೆಗಳಲ್ಲಿ ಪತ್ತೆಯಾಗಿರುವ ಫಿಪ್ರೋನಿಲ್ ಮನುಷ್ಯನ ದೇಹ ಸೇರಿದ್ರೆ, ಲಿವರ್ ಮತ್ತು ಕಿಡ್ನಿಗೆ ಸಂಬಂಧಿಸಿದ ಖಾಯಿಲೆಗಳು ಬರುವ ಸಾಧ್ಯತೆ ಇದೆ. ಅಷ್ಟೇ ಅಲ್ಲ ಥೈರಾಯ್ಡ್ ಗ್ರಂಥಿಗೂ ತೊಂದರೆಯಾಗಬಹುದು. ಫಿಪ್ರೋನಿಲ್ ದೇಹ ಸೇರಿದ್ರೆ ವಾಂತಿ, ತಲೆತಿರುಗುವಿಕೆ ಹಾಗೂ ಹೊಟ್ಟೆಯ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...