alex Certify
ಕನ್ನಡ ದುನಿಯಾ       Mobile App
       

Kannada Duniya

20 ದಿನಗಳ ಬಳಿಕ ಬಂತು ಲಂಡನ್ –ಚೀನಾ ರೈಲು

china-rail

ಬೀಜಿಂಗ್: ಲಂಡನ್ ನಿಂದ ಹೊರಟು ಬರೋಬ್ಬರಿ 20 ದಿನಗಳ ಬಳಿಕ, ಮೊದಲ ರೈಲು ಚೀನಾ ತಲುಪಿದೆ. 12,000 ಕಿಲೋ ಮೀಟರ್ ದೂರವನ್ನು ಕ್ರಮಿಸಿದ ಈ ರೈಲು  ಔಷಧ, ವಿಸ್ಕಿ, ಬೇಬಿ ಮಿಲ್ಕ್, ಯಂತ್ರೋಪಕರಣ ಮೊದಲಾದವುಗಳನ್ನು ಹೊತ್ತು ತಂದಿದೆ.

ಏಪ್ರಿಲ್ 10 ರಂದು ಲಂಡನ್ ನಿಂದ ಹೊರಟ ರೈಲು ಫ್ರಾನ್ಸ್, ಬೆಲ್ಜಿಯಂ, ಜರ್ಮನಿ, ಪೋಲೆಂಡ್, ರಷ್ಯಾ, ಕಜೆಕಿಸ್ತಾನ ಮೂಲಕ ಚೀನಾದ ಯಿವು ನಗರವನ್ನು ತಲುಪಿದೆ.

ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣಗಳಿಂದ ಜಾಗತಿಕ ಮಟ್ಟದಲ್ಲಿ ಶೇ. 80 ರಷ್ಟು ವಹಿವಾಟು ಸಮುದ್ರಯಾನದ ಮೂಲಕ ನಡೆಯುತ್ತದೆ.

ಯುರೋಪ್ ಕಂಟ್ರಿಗಳೊಂದಿಗೆ ವ್ಯಾಪಾರ, ವಹಿವಾಟು ವೃದ್ಧಿ ಮಾಡಿಕೊಳ್ಳುವ ಉದ್ದೇಶದಿಂದ ಚೀನಾ ಒನ್ ಬೆಲ್ಟ್ ಒನ್ ರೋಡ್ ಯೋಜನೆಯಡಿ ಈ ರೈಲು ಮಾರ್ಗವನ್ನು ನಿರ್ಮಿಸಿದೆ.

12,000 ಕಿಲೋ ಮೀಟರ್ ಉದ್ದದ ರೈಲು ಮಾರ್ಗ ನಿರ್ಮಾಣಕ್ಕೆ ಚೀನಾ ಲಕ್ಷಾಂತರ ಕೋಟಿ ರೂ. ಬಂಡವಾಳವನ್ನು ಹೂಡಿಕೆ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...