alex Certify
ಕನ್ನಡ ದುನಿಯಾ       Mobile App
       

Kannada Duniya

ತಾಯಿಯಿಲ್ಲದ ಮಗುವಿಗೆ ಪ್ರತಿದಿನ ಕೂದಲು ಬಾಚುವುದು ಯಾರು ಗೊತ್ತಾ…?

ತಾಯಿಯಿಲ್ಲದ ಮಕ್ಕಳು ಅನಾಥರಿದ್ದಂತೆ ಎಂಬ ಮಾತಿದೆ. ಹೆಣ್ಣು ಮಕ್ಕಳಿಗೆ ಅವಶ್ಯವಾಗಿ ತಾಯಿ ಪ್ರೀತಿ ಬೇಕೇಬೇಕು. ತಾಯಿಯಿಲ್ಲದ ಹೆಣ್ಣು ಮಕ್ಕಳು ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವುದನ್ನು ನಿಧಾನವಾಗಿ ಅಭ್ಯಾಸ ಮಾಡಿಕೊಳ್ತಾರೆ. ಇದಕ್ಕೆ ಇಸಾಬೆಲ್ಲಾ ಪಿಯೆರಿ ಕೂಡ ಹೊರತಾಗಿಲ್ಲ.

11 ವರ್ಷದ ಇಸಾಬೆಲ್ಲಾ 2 ವರ್ಷಗಳ ಹಿಂದೆಯೇ ತಾಯಿಯನ್ನು ಕಳೆದುಕೊಂಡಿದ್ದಾಳೆ. ತಂದೆ ಬೆಳಿಗ್ಗೆ ಬೇಗ ಎದ್ದು ಕೆಲಸಕ್ಕೆ ಹೋಗ್ತಾರೆ. ಹಾಗಾಗಿ ತನ್ನೆಲ್ಲ ಕೆಲಸವನ್ನು ತಾನೇ ಮಾಡಿಕೊಳ್ಳುವ ಜಾಣ್ಮೆ ಇಸಾಬೆಲ್ಲಾಗಿದೆ. ಆದ್ರೆ ಇಸಾಬೆಲ್ಲಾಗೆ ಅತಿ ಕಿರಿಕಿರಿ ನೀಡ್ತಿದ್ದ ವಿಷ್ಯವೆಂದ್ರೆ ಆಕೆ ಕೂದಲು.

ಸ್ಕೂಲಿಗೆ ಕೂದಲು ಬಾಚಿಕೊಂಡು ಬರೋದು ಇಸಾಬೆಲ್ಲಾಗೆ ಒಂದು ಚಿಂತೆಯ ವಿಷ್ಯವಾಗಿತ್ತು. ಸದಾ ಕೂದಲು ಹರಡಿಕೊಂಡು ಬರ್ತಿದ್ದಳು. ಒಂದು ದಿನ ಬಸ್ ಡ್ರೈವರ್ Tracy Dean ಬೇರೆ ಮಕ್ಕಳಿಗೆ ಕೂದಲು ಬಾಚುವುದನ್ನು ಇಸಾಬೆಲ್ಲ ನೋಡಿದ್ದಾಳೆ. ತಕ್ಷಣ Tracy Deanಗೆ ತನ್ನ ಕೂದಲು ಬಾಚುವಂತೆ ಕೇಳಿದ್ದಾಳೆ.

ಅಲ್ಲಿಂದ ಈವರೆಗೆ ಪ್ರತಿ ದಿನ ಇಸಾಬೆಲ್ಲ ಕೂದಲನ್ನು ಡ್ರೈವರ್ Tracy Dean ಬಾಚುತ್ತಾರೆ. ಎಲ್ಲರೂ ನನ್ನ ಮಕ್ಕಳಂತೆ. ನನಗೂ ಸಮಸ್ಯೆಯಿದೆ. ಹಾಗೆ ಇಸಾಬೆಲ್ಲ ಕೂಡ ಸಾಕಷ್ಟು ಸಮಸ್ಯೆ ಎದುರಿಸಿದ್ದಾಳೆ. ಆಕೆಗೆ ನೆರವಾಗೋದು ನನ್ನ ಕರ್ತವ್ಯ ಎನ್ನುತ್ತಾರೆ Tracy Dean.

ಕೂದಲು ಕಿತ್ತಾಡಿಕೊಂಡು ಶಾಲೆಗೆ ಬರ್ತಿದ್ದ ಇಸಾಬೆಲ್ಲ ಹೇರ್ ಸ್ಟೈಲ್ ಈಗ ಬದಲಾಗಿದೆ. ಸುಂದರ ಹೇರ್ ಸ್ಟೈಲ್ ನೊಂದಿಗೆ ಶಾಲೆಗೆ ಬರುವ ಇಸಾಬೆಲ್ಲಾ ವರ್ತನೆ ಕೂಡ ಬದಲಾಗಿದೆ. ಹೆಚ್ಚು ಆತ್ಮವಿಶ್ವಾಸ ಆಕೆಗೆ ಬಂದಿದೆ ಎನ್ನುತ್ತಾರೆ ಶಿಕ್ಷಕರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...