alex Certify
ಕನ್ನಡ ದುನಿಯಾ       Mobile App
       

Kannada Duniya

ಬುರ್ಜ್ ಖಲೀಫಾವನ್ನೂ ಮೀರಿಸಲಿದೆ ಈ ಗಗನಚುಂಬಿ ಕಟ್ಟಡ

tallest-building

ದುಬೈನಲ್ಲಿ ಸದ್ಯದಲ್ಲೇ ಮತ್ತೊಂದು ಗಗನಚುಂಬಿ ಕಟ್ಟಡ ತಲೆ ಎತ್ತಲಿದೆ. ಸದ್ಯ ವಿಶ್ವದಲ್ಲೇ ಅತಿ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರೋ ಬುರ್ಜ್ ಖಲೀಫಾಗಿಂತಲೂ ಎತ್ತರದ ಕಟ್ಟಡ ಇದು.

ಈ ಅದ್ಭುತ ಕಟ್ಟಡದ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ದಿ ಗಲ್ಫ್ ಎಮಿರೇಟ್ಸ್ ನ ಆಡಳಿತಾಧಿಕಾರಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್, ದುಬೈ ಕ್ರೀಕ್ ಹಾರ್ಬರ್ ನಲ್ಲಿ ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದಾರೆ.

2020 ರ ವೇಳೆಗೆ ಈ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಬುರ್ಜ್ ಖಲೀಫಾ 828 ಮೀಟರ್ ಎತ್ತರವಿದೆ, ನೂತನ ಕಟ್ಟಡ ಅದನ್ನೂ ಮೀರಿಸಲಿದೆ ಅಂತಾ ನಿರ್ಮಾಣದ ಹೊಣೆ ಹೊತ್ತಿರುವ ಎಮಾರ್ ಪ್ರಾಪರ್ಟೀಸ್ ತಿಳಿಸಿದೆ. ಆದ್ರೆ ಎಷ್ಟು ಎತ್ತರವಿರಲಿದೆ ಎಂಬ ಬಗ್ಗೆ ಖಚಿತ ಮಾಹಿತಿ ನೀಡಿಲ್ಲ. ಈ ಕಟ್ಟಡ ನಿರ್ಮಾಣಕ್ಕೆ ಸುಮಾರು 1 ಬಿಲಿಯನ್ ಡಾಲರ್ ವೆಚ್ಚಲಾಗಿದೆ. ಸ್ಪೇನ್-ಸ್ವಿಡ್ಜರ್ಲೆಂಡ್ ಮೂಲದ ವಾಸ್ತುಶಿಲ್ಪಿ ಸ್ಯಾಂಟಿಗೋ ಕಾಲಾಟ್ರವಾ ವಾಲ್ಸ್ ಇದನ್ನು ವಿನ್ಯಾಸ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...