alex Certify
ಕನ್ನಡ ದುನಿಯಾ       Mobile App
       

Kannada Duniya

ದುಬೈ ವಿಮಾನದಲ್ಲಿ ಇನ್ಮುಂದೆ ಸಿಗಲ್ಲ `ಹಿಂದು ಊಟ’

ದುಬೈನ ಅತಿದೊಡ್ಡ ಏರ್ಲೈನ್ಸ್ ಎಮಿರೇಟ್ಸ್ ವಿಮಾನದಲ್ಲಿ ಇನ್ಮುಂದೆ ಹಿಂದುಗಳ ಊಟ ಸಿಗೋದಿಲ್ಲ. ಕಂಪನಿ ತನ್ನ ಮೆನುವಿನಿಂದ ಇದನ್ನು ತೆಗೆದು ಹಾಕಿದೆ. ಕೆಲ ಅಂತರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣಿಕರು ತಮ್ಮ ಧರ್ಮಕ್ಕೆ ತಕ್ಕಂತೆ ಆಹಾರವನ್ನು ಬುಕ್ ಮಾಡಬಹುದು. ವಿಮಾನ ಹಾರಾಟಕ್ಕೂ ಮುನ್ನವೇ ಪ್ರಯಾಣಿಕರು ಆಹಾರವನ್ನು ಬುಕ್ ಮಾಡಬಹುದು.

ಇನ್ಮುಂದೆ ಎಮಿರೇಟ್ಸ್ ಈ ಸೌಲಭ್ಯವನ್ನು ಪ್ರಯಾಣಿಕರಿಗೆ ನೀಡ್ತಿಲ್ಲ. ಹಿಂದು ಪ್ರಯಾಣಿಕರು ಎಂಡ್ವಾನ್ಸ್ ಆಗಿ ಕ್ಷತ್ರಿಯ ಸಸ್ಯಹಾರಿ ಮಳಿಗೆಗಳಲ್ಲಿ ಆಹಾರ ಬುಕ್ ಮಾಡಬಹುದು ಎಂದು ಕಂಪನಿ ತಿಳಿಸಿದೆ. ಕ್ಷತ್ರಿಯ ಸಸ್ಯಹಾರಿ ಮಳಿಗೆಗಳು ವಿಮಾನದ ಒಳಗೂ ಆಹಾರ ಒದಗಿಸುತ್ತವೆ. ಹಾಗಾಗಿ ಹಿಂದು ವಿಮಾನ ಪ್ರಯಾಣಿಕರಿಗೆ ಊಟದ ಸಮಸ್ಯೆಯಾಗುವುದಿಲ್ಲವೆಂದು ಕಂಪನಿ ಹೇಳಿದೆ.

ಸಾಮಾನ್ಯವಾಗಿ ಎಲ್ಲ ವಿಮಾನ ಕಂಪನಿಗಳೂ ವಿಮಾನದಲ್ಲಿ ಸಸ್ಯಹಾರಿ ಹಾಗೂ ಮಾಂಸಹಾರಿ ಆಹಾರವನ್ನು ನೀಡುತ್ತದೆ. ಗೋಮಾಂಸ ಹಾಗೂ ಹಂದಿ ಮಾಂಸ ತಿನ್ನದವರಿಗಾಗಿ ಈ ವ್ಯವಸ್ಥೆ ಮಾಡಲಾಗುತ್ತದೆ. ಏರ್ ಇಂಡಿಯಾ ಹಾಗೂ ಸಿಂಗಾಪುರ ಏರ್ಲೈನ್ಸ್ ಮೆನುವಿನಲ್ಲಿ ಕೂಡ ಧಾರ್ಮಿಕ ಭೋಜನದ ವ್ಯವಸ್ಥೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...