alex Certify
ಕನ್ನಡ ದುನಿಯಾ       Mobile App
       

Kannada Duniya

ಕುಡಿದ ಅಮಲಿನಲ್ಲಿ ಮೊಸಳೆಗಳಿದ್ದ ಕೊಳಕ್ಕೆ ಧುಮುಕಿದ್ದ ಭೂಪ…!

21 ವರ್ಷದ ಯುವಕನೊಬ್ಬ ನಿಷೇಧಿತ ಪ್ರದೇಶಕ್ಕೆ ಹೋಗಿ ತಂತಿ ಬೇಲಿ ಹತ್ತಿದ್ದೂ ಅಲ್ಲದೇ ಮೂರು ಮೊಸಳೆಗಳಿದ್ದ ಕೊಳವೊಂದಕ್ಕೆ ಹಾರಿದ ಘಟನೆ ಜಿಂಬಾಬ್ವೆಯಲ್ಲಿ ನಡೆದಿದೆ.

ಪ್ರವಾಸಿ ತಾಣವಾಗಿದ್ದ ಈ ಕೊಳದ ಪಕ್ಕದಲ್ಲಿಯೇ ಬಾರ್ ಕೂಡ ಇತ್ತು. ಆ ಬಾರ್ ನಲ್ಲಿ ಕಂಠಪೂರ್ತಿ ಕುಡಿದಿದ್ದ ಕೊಲಿನ್ ಮಿಲ್ಲರ್ ಎಂಬಾತ ಕೊಳದಲ್ಲಿ ಹಾರಿದ್ದಾನೆ. ಆದರೆ ಕೊಳದಲ್ಲಿದ್ದ ಮೊಸಳೆಗಳು ಈತನನ್ನು ಕಚ್ಚಿದರೂ ಆಶ್ಚರ್ಯಕರ ರೀತಿಯಲ್ಲಿ ಜೀವಾಪಾಯದಿಂದ ಪಾರಾಗಿದ್ದಾನೆ.

ಆತ ಜಿಗಿದಿದ್ದನ್ನು ನೋಡಿದ ಇಬ್ಬರು ಸ್ಥಳೀಯರು ಆತನನ್ನು ರಕ್ಷಿಸಿದ್ದಾರೆ. ಅಷ್ಟರಲ್ಲಾಗಲೇ ಮೊಸಳೆಗಳು ಮಿಲ್ಲರ್ ನನ್ನು ಕಚ್ಚಿದ್ದು ಸಾಕಷ್ಟು ಗಾಯಗಳಾಗಿವೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...