alex Certify
ಕನ್ನಡ ದುನಿಯಾ       Mobile App
       

Kannada Duniya

ಡ್ರೋಣ್ ದಾಳಿಗೆ ಬಲಿಯಾದ ಭಟ್ಕಳದ ಐಸಿಸ್ ಉಗ್ರ

drone

ಅಮೆರಿಕ ಸೇನಾಪಡೆಗಳು ಸಿರಿಯಾದಲ್ಲಿ ನಡೆಸಿದ ಡ್ರೋಣ್ ದಾಳಿಯಲ್ಲಿ ಕರ್ನಾಟಕದ ಭಟ್ಕಳ ಮೂಲದ ಐಸಿಸ್ ಉಗ್ರ ಮಹಮ್ಮದ್ ಶಫಿ ಅರ್ಮರ್ ಹತನಾಗಿದ್ದಾನೆ. ಈತ ಭಾರತದಲ್ಲಿ ಐಸಿಸ್ ಗೆ ಯುವಕರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದ ಎಂದು ಹೇಳಲಾಗಿದೆ.

ಭಟ್ಕಳ ಮೂಲದ 26 ವರ್ಷದ ಅರ್ಮರ್, ಐಸಿಸ್ ಸಂಘಟನೆಯ ಪ್ರಮುಖನಾಗಿದ್ದ ಅಬೂಬಕ್ಕರ್ ಬಾಗ್ದಾದಿಯೊಂದಿಗೆ ಆತ್ಮೀಯನಾಗಿದ್ದ. ಮೊದಲಿಗೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಪರವಾಗಿ ಕೆಲಸ ಮಾಡುತ್ತಿದ್ದ ಅರ್ಮರ್, ನಂತರದಲ್ಲಿ ಐಸಿಸ್ ಗೆ ಭಾರತೀಯ ಯುವಕರನ್ನು ನೇಮಕಾತಿ ಮಾಡಿಕೊಳ್ಳುವ ಕೆಲಸದಲ್ಲಿ ತೊಡಗಿದ್ದ. ಭಾರತದ ಸುಮಾರು 700 ಯುವಕರೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕದಲ್ಲಿರುವ ಆತ ಇಲ್ಲಿಂದ ಯುವಕರನ್ನು ಕರೆಸಿಕೊಳ್ಳುತ್ತಿದ್ದ ಎನ್ನಲಾಗಿದೆ.

ಈತನ ಸಹೋದರ ಸುಲ್ತಾನ್ ಎಂಬಾತ 2015 ರ ಮಾರ್ಚ್ ನಲ್ಲಿ ಹತ್ಯೆಯಾಗಿದ್ದ. ಇದೀಗ, ಸಿರಿಯಾದಲ್ಲಿ ಅಮೆರಿಕ ಸೇನೆ ನಡೆಸಿದ ಡ್ರೋಣ್ ದಾಳಿಯಲ್ಲಿ ಮಹಮ್ಮದ್ ಅರ್ಮರ್ ಮೃತಪಟ್ಟಿದ್ದಾನೆ. ಈತ ಭಾರತದಲ್ಲಿ ಐಸಿಸ್ ಸಂಘಟಿಸಲು ಯೋಜಿಸಿದ್ದ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...