alex Certify
ಕನ್ನಡ ದುನಿಯಾ       Mobile App
       

Kannada Duniya

ಈಜು ಕೊಳಕ್ಕೆ ನುಗ್ಗಿದ ಕಾರ್…!

ಚಾಲನೆ ಕಲಿಯುವಾಗ ಕಾರ್ ಈಜುಕೊಳಕ್ಕೆ ನುಗ್ಗಿದ ಸುದ್ದಿ ಎಂದಾದ್ರೂ ಕೇಳಿದ್ದಿರಾ. ಈ ಸುದ್ದಿ ಕೇಳಿದ್ಮೇಲೆ ನಂಬಲು ಅಸಾಧ್ಯವಾಗಿದೆ. ಆದ್ರೆ ಇಂತಹ ಘಟನೆ ಅಮೆರಿಕದ ಮಾಂಟ್ಗೊಮೆರಿಯಲ್ಲಿ ನಡೆದಿದೆ.

ವರದಿಯ ಅನುಸಾರ 60 ವರ್ಷದ ಮಹಿಳೆ ಕಾರ್ ಪಾರ್ಕ್ ಮಾಡುವುದನ್ನು ಕಲಿಯುತ್ತಿದ್ದಳು. ಈ ವೇಳೆ ಕಾರ್ ಮೇಲಿನ ನಿಯಂತ್ರಣ ತಪ್ಪಿ, ಈಜುಕೊಳಕ್ಕೆ ನುಗಿದೆ. ಕಾರ್ ಸ್ವಿಮಿಂಗ್ ಪೂಲ್ ಗೆ ನುಗ್ಗುತ್ತಿದ್ದಂತೆ ಮಹಿಳೆ ಹಾಗೂ ತರಬೇತುದಾರ, ಅದೃಷ್ಟವಶಾತ್ ಪಾರಾಗಿದ್ದಾರೆ. ಅಲ್ಲದೆ ಕಾರ್ ನಿಂದ ಹೊರ ಬಂದು ಈಜಿ ದಡ ಸೇರಿದ್ದಾರೆ.

ಮಾಂಟ್ಗೊಮೆರಿ ಕೌಂಟಿಯ ಪ್ರಧಾನ ವಕ್ತಾರ, ಪೀಟ್ ಪಿರಿಂಗರ್ ಈ ಫೋಟೋಗಳನ್ನು ಟ್ವಿಟರ್ನಲ್ಲಿ ಹಾಕುತ್ತಿದ್ದಂತೆ ಈ ಸುದ್ದಿ ಸಕತ್ ವೈರಲ್ ಆಗಿದೆ. ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಅಂದ ಹಾಗೆ ಈ ಹಿಂದೆಯೂ ಕಾರ್ ಒಂದು ಕ್ಯಾಲಿಫೋರ್ನಿಯಾದ ಎರಡನೇ ಮಹಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದನ್ನು ಸ್ಮರಿಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...