alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಪ್ರವಾಹದಲ್ಲಿ ಸಿಲುಕಿದ್ದವನ ರಕ್ಷಣೆ ವಿಡಿಯೋ

ಅಗ್ನಿಶಾಮಕ ಸಿಬ್ಬಂದಿ ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬನ ಪಾಲಿಗೆ ಆಪದ್ಬಾಂಧವನಾದ ಘಟನೆ ಪೂರ್ವ ಚೀನಾದ ಕ್ಷೆಜಿನಿಂಗ್ ಪ್ರಾಂತ್ಯದಲ್ಲಿ ನಡೆದಿದೆ. ಚೀನಾದ ಸುರ್ಗಿಂಗ್ ನದಿಯ ಪ್ರವಾಹದಲ್ಲಿ ಕಾರಿನ ಸಮೇತ ವ್ಯಕ್ತಿಯೊಬ್ಬ ಕೊಚ್ಚಿಕೊಂಡು ಹೋಗಿದ್ದ. ಅದೃಷ್ಟವಶಾತ್ ಬಂಡೆಯೊಂದರ ಮಧ್ಯೆ ಅವನ ಕಾರು ಸಿಕ್ಕಿಹಾಕಿಕೊಂಡಿತ್ತು. ಕೂಡಲೇ ಆತನ ಸಹಾಯಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿದ್ರು.

ಲ್ಯಾಡರನ್ನೇ ಕಾರಿಗೆ ಅಡ್ಡವಾಗಿಟ್ಟು ಸೇತುವೆಯಂತೆ ಬಳಸಿ ವ್ಯಕ್ತಿಯ ಪ್ರಾಣ ಕಾಪಾಡಿದ್ರು. ಒಂದೇ ಒಂದು ಚಿಕ್ಕ ಗಾಯವೂ ಸಹ ಆಗದಂತೆ ಸಂತ್ರಸ್ಥನ ಜೀವ ಉಳಿಸಿದ್ರು. ವ್ಯಕ್ತಿಯ ಪ್ರಾಣ ಕಾಪಾಡಿದ ಕೆಲ ನಿಮಿಷಗಳಲ್ಲೇ ಕಾರು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿದೆ. ಚೀನಾದ ಗ್ಲೋಬಲ್ ಟಿವಿ ನೆಟ್ವರ್ಕ್ ನಲ್ಲಿ ಈ ಘಟನೆಯ ದೃಶ್ಯಾವಳಿ ಹರಿದಾಡ್ತಿದೆ.

ಆನಂತರದಲ್ಲಿ ಸಾಮಾಜಿಕ ಜಾಲತಾಣದಲ್ಲೂ ಹರಿದಾಡ್ತಿರುವ ವಿಡಿಯೋಗೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂತ್ರಸ್ಥನ ಪ್ರಾಣ ಉಳಿಸಿದ ಅಗ್ನಿಶಾಮಕದಳದ ಸಿಬ್ಬಂದಿಯ ಕಾರ್ಯವನ್ನ ಕೊಂಡಾಡುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...