alex Certify
ಕನ್ನಡ ದುನಿಯಾ       Mobile App
       

Kannada Duniya

ಚಲಿಸುತ್ತಿರೋ ಬಸ್ ನಲ್ಲಿ ಸೀಟು ಬಿಟ್ಟೆದ್ದು ಕುಣಿಯಲಾರಂಭಿಸಿದ ಚಾಲಕ, ಮುಂದೆ?

ಚಲಿಸ್ತಾ ಇರೋ ಬಸ್ಸಿನಲ್ಲಿ ಡ್ರೈವರ್ ಸ್ಟೇರಿಂಗ್ ಬಿಟ್ಟು ಡಾನ್ಸ್ ಮಾಡಲು ಶುರು ಮಾಡಿದ್ರೆ ಹೇಗಿರುತ್ತೆ ಹೇಳಿ? ಪ್ರಯಾಣಿಕರ ಗುಂಡಿಗೆಯೇ ಅರೆಕ್ಷಣ ನಿಂತು ಹೋಗೋದು ಗ್ಯಾರಂಟಿ. ಕೊಲಂಬಿಯಾದಲ್ಲೂ ಇಂಥದ್ದೇ ಘಟನೆಯೊಂದು ನಡೆದಿದೆ.

ಬಸ್ ನಲ್ಲಿ ಜೋರಾಗಿ ಹಾಡು ಹಾಕಿಕೊಂಡು ಪ್ರಯಾಣಿಕರೆಲ್ಲ ಎಂಜಾಯ್ ಮಾಡುತ್ತಿದ್ರು. ಅದನ್ನು ನೋಡಿ ಚಾಲಕ ಕೂಡ ಸೀಟು ಬಿಟ್ಟು ಎದ್ದಿದ್ದಾನೆ. ತಾನೂ ಹಾಡು ಹೇಳುತ್ತ ಕುಣಿಯಲು ಶುರು ಮಾಡಿದ್ದಾನೆ. ಬಸ್ ಮುಂದಕ್ಕೆ ಚಲಿಸುತ್ತಲೇ ಇತ್ತು.

ಚಾಲಕ ಮಾತ್ರ ಬಸ್ ಅಪಘಾತಕ್ಕೀಡಾಗಬಹುದು ಅನ್ನೋ ಟೆನ್ಷನ್ ಕೂಡ ಇಲ್ಲದೇ ಹಾಡುತ್ತ ಕುಣಿಯುತ್ತ ಮೈಮರೆತಿದ್ದ. ಈ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು, ಜನರಲ್ಲಿ ದಿಗ್ಭ್ರಮೆ ಮೂಡಿಸಿದೆ. ಆದ್ರೆ ವಿಡಿಯೋದ ಕೊನೆಯಲ್ಲೊಂದು ಟ್ವಿಸ್ಟ್ ಇದೆ.

ಅಸಲಿಗೆ ಚಾಲಕ ಬಸ್ ಓಡಿಸ್ತಾ ಇರಲಿಲ್ಲ. ಕೆಟ್ಟು ಹೋಗಿದ್ದ ಬಸ್ ಅನ್ನು ಕ್ರೇನ್ ಮೂಲಕ ಎಳೆದುಕೊಂಡು ಹೋಗಲಾಗುತ್ತಿತ್ತು. ತಮಾಷೆಗೆ ಅಂತಾ ಬಸ್ ಚಲಾಯಿಸಿದಂತೆ ಪೋಸ್ ಕೊಟ್ಟ ಡ್ರೈವರ್, ಈ ಫನ್ನಿ ವಿಡಿಯೋ ಮಾಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...