alex Certify
ಕನ್ನಡ ದುನಿಯಾ       Mobile App
       

Kannada Duniya

ವಾವ್ ! ಈತ ಡ್ರಿಂಕ್ಸ್ ಸರ್ವ್ ಮಾಡೋದನ್ನ ನೋಡಿದ್ರೆ ಅಚ್ಚರಿಪಡ್ತೀರಿ !!

CANHEAD nm

ವಾಷಿಂಗ್ಟನ್: ಸಾಮಾನ್ಯವಾಗಿ ಬಾರ್, ಡಾಬಾ ಸೇರಿದಂತೆ ಇತರ ಕಡೆಗಳಲ್ಲಿ ಮದ್ಯ ಸೇವಿಸಲು ಹೋದವರಿಗೆ ಅಲ್ಲಿನ ಸಿಬ್ಬಂದಿ ಕೈಯಲ್ಲಿ, ಟ್ರೇನಲ್ಲಿ ಹಿಡಿದುಕೊಂಡು ಮದ್ಯ ಸರ್ವ್ ಮಾಡುತ್ತಾರೆ. ಆದರೆ ಇಲ್ಲೊಬ್ಬ ಭೂಪ ಸರ್ವ್ ಮಾಡುವುದನ್ನು ನೋಡಿದರೇ ನೀವು ಖಂಡಿತಾ ಅಚ್ಚರಿಗೆ ಒಳಗಾಗುತ್ತೀರಿ.

ಮದ್ಯದ ಬಾಟಲಿಗಳನ್ನು ಮುಖದ ಮೇಲೆ ಅಂಟಿಸಿಕೊಂಡು ಟೇಬಲ್ ಬಳಿಗೆ ಹೋಗಿ ಗ್ರಾಹಕರಿಗೆ ಬೇಕಾದಷ್ಟು ಮದ್ಯ ಹಾಕುತ್ತಾನೆ. ಅಮೆರಿಕದ ಇಲನಾಯ್ಸ್ ಸಿಟಿಯ ಜೇಮಿ ಕೀಟನ್ ಹೀಗೆ ವಿಭಿನ್ನವಾಗಿ ಮದ್ಯವನ್ನು ಸರ್ವ್ ಮಾಡುವ ಮೂಲಕ ಎಲ್ಲರನ್ನು ಚಕಿತಗೊಳಿಸಿದ್ದಾನೆ. ಜೇಮಿ ಕೀಟನ್ ಗೆ ಅಪರೂಪದ ಚರ್ಮದ ಕಾಯಿಲೆ ಇದ್ದು, ಅದನ್ನೇ ತನ್ನ ದುಡಿಮೆಯ ದಾರಿಯನ್ನಾಗಿ ಮಾಡಿಕೊಂಡಿದ್ದಾನೆ. ಈತನ ಚರ್ಮದಲ್ಲಿರುವ ರಂಧ್ರಗಳು ಗಾಳಿಯನ್ನು ಒಳಗೆ ಎಳೆದುಕೊಳ್ಳಲಿದ್ದು, ಅದರಿಂದ ಸುಲಭವಾಗಿ ಬಾಟಲಿ, ಕ್ಯಾನ್ ಅಂಟಿಕೊಳ್ಳುತ್ತವೆ.

ಈತ ಮುಖದ ಮೇಲೆ ಕ್ಯಾನ್ ಅಂಟಿಸಿಕೊಂಡು ಸರ್ವ್ ಮಾಡುವುದು ಗ್ರಾಹಕರನ್ನು ಸೆಳೆದಿದ್ದು, ಹೆಚ್ಚು ಗ್ರಾಹಕರು ಬರುತ್ತಾರೆ. ಅಲ್ಲದೇ, ಕೆಲವು ಪಾನೀಯ ಕಂಪನಿಗಳು ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಿಕ್ಕೆ ಅಪಾರ ಹಣ ಕೂಡ ನೀಡಿವೆ. ಹೀಗೆ ತನಗಿರುವ ಚರ್ಮದ ಕಾಯಿಲೆಯನ್ನೇ ದುಡಿಮೆಗೆ ಬಳಸಿಕೊಳ್ಳುವ ಮೂಲಕ ಜೇಮಿ ಗಮನ ಸೆಳೆದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...