alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಮರಾದಲ್ಲಿ ಸೆರೆಯಾಗಿದೆ ಉ. ಕೊರಿಯಾ ಮಿಲಿಟರಿಯ ಕಳ್ಳ ಹೆಜ್ಜೆ

ಉತ್ತರ ಕೊರಿಯಾದ ಸೈನಿಕರಿಂದ ತಪ್ಪಿಸಿಕೊಳ್ಳಲು ಭ್ರಷ್ಟನೊಬ್ಬ ದಕ್ಷಿಣ ಕೊರಿಯಾಕ್ಕೆ ಅಕ್ರಮವಾಗಿ ಪ್ರವೇಶಿಸುತ್ತಿರುವ ವಿಡಿಯೋವನ್ನು ವಿಶ್ವ ಸಂಸ್ಥೆ ಬಿಡುಗಡೆ ಮಾಡಿದೆ. ಹಸಿರು ಬಣ್ಣದ ಜೀಪ್ ನಲ್ಲಿ ಕೊರಿಯಾ ಮಿಲಿಟರಿ ಪಡೆ ಆತನ ಬೆನ್ನಟ್ಟಿ ಬಂದಿತ್ತು.

ಒಂದೇ ಸಮನೆ ಗುಂಡು ಹಾರಿಸಿ ಅವನನ್ನು ಹಿಡಿಯಲು ಭದ್ರತಾ ಪಡೆ ಪ್ರಯತ್ನಿಸಿದೆ. ಆದ್ರೆ ಆತ ಅರೆಕ್ಷಣವೂ ನಿಲ್ಲದೆ ಓಡುತ್ತಿದ್ದ. ಬಳಿಕ ಉತ್ತರ ಕೊರಿಯಾದ ಗಡಿ ದಾಟಿ ದಕ್ಷಿಣ ಕೊರಿಯಾ ಪ್ರವೇಶಿಸಿಬಿಟ್ಟಿದ್ದಾನೆ. ಆದ್ರೆ ಸೈನಿಕರು ಹಾರಿಸಿದ್ದ ಗುಂಡು ತಗುಲಿದ್ದರಿಂದ ಪರಾರಿಯಾಗಲು ಸಾಧ್ಯವಾಗಲಿಲ್ಲ.

ಗಾಯಗೊಂಡು ಆತ ಅಲ್ಲೇ ಬಿದ್ದಿದ್ದ. ಉತ್ತರ ಕೊರಿಯಾ ಸೈನಿಕರು ಗಡಿ ದಾಟಿ ಆತನನ್ನು ಹಿಡಿದುಕೊಂಡು ಬಂದಿದ್ದಾರೆ. ಸುಮಾರು 40 ಸುತ್ತು ಗುಂಡು ಹಾರಿಸಿದ್ದಾರೆ ಅಂತಾ ಹೇಳಲಾಗ್ತಿದೆ. ಈ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಉತ್ತರ ಕೊರಿಯಾ ಹಾಗೂ ದಕ್ಷಿಣ ಕೊರಿಯಾ ಮಧ್ಯೆ ತೀವ್ರ ಹಗೆತನವಿದೆ. ಈಗ ಉತ್ತರ ಕೊರಿಯಾ ಸೈನಿಕರು ಗಡಿ ದಾಟಿರೋದು ಹೊಸ ವಿವಾದಕ್ಕೂ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...