alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ತಾಯಿ-ಮಗುವಿನ ರಕ್ಷಣೆಯ ವಿಡಿಯೋ

ಟೆಕ್ಸಾಸ್‌: ಅಮೆರಿಕದ ಗಲ್ಫ್ ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ, ಹೂಸ್ಟನ್‌, ಟೆಕ್ಸಾಸ್‌  ಅಕ್ಷರಶಃ ಮುಳುಗಿದ್ದು, ಟೆಕ್ಸಾಸ್‌ನ ಪ್ರವಾಹದಲ್ಲಿ ಕೊಚ್ಚಿಹೋಗಲಿದ್ದ ತಾಯಿ- ಮಗುವನ್ನು ರಕ್ಷಣಾ ಪಡೆ ಸಿನಿಮೀಯ ರೀತಿಯಲ್ಲಿ ಕಾಪಾಡಿದೆ.

ತಾಯಿ- ಮಗುವನ್ನು ಕಾಪಾಡಿದ ದೃಶ್ಯವನ್ನ ಯುನೈಟೆಡ್‌ ಸ್ಟೇಟ್ಸ್‌ ಕೋಸ್ಟ್‌ ಗಾರ್ಡ್‌ ಇಲಾಖೆ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದೆ. ಹಾರ್ವೆ ಚಂಡಮಾರುತದ ಪರಿಣಾಮ ರಸ್ತೆಗಳೆಲ್ಲ ನದಿಯಂತಾಗಿ ಪರಿಣಮಿಸಿದ್ದು, ನಿರಾಶ್ರಿತರ ರಕ್ಷಣಾ ಕಾರ್ಯವನ್ನ ನಿರಂತರವಾಗಿ ನಡೆಸಲಾಗುತ್ತಿದೆ.

ತನ್ನ ಚಿಕ್ಕ ಮಗುವನ್ನು ಎತ್ತಿಕೊಂಡು, ಸಂಪೂರ್ಣ ನೀರಿನಲ್ಲಿ ಮುಳುಗಿಹೋಗಿರುವ ಮನೆಯ ಛಾವಣಿಯ ಮೇಲೆ ನಿಂತು ರಕ್ಷಣೆಗಾಗಿ ಗೋಗರೆಯುತ್ತಿದ್ದ ಆ ತಾಯಿಯನ್ನು, ಹೆಲಿಕಾಪ್ಟರ್‌ ಮೂಲಕ ಕಾರ್ಟ್‌ ಕೆಳಗೆ ಕಳಿಸಿ ಅದರ ಮೂಲಕ ಅವರನ್ನ ಎತ್ತಿ ಹೆಲಿಕಾಪ್ಟರ್‌ ಗೆ ಹತ್ತಿಸಿಕೊಳ್ಳಲಾಯಿತು. ಈ ವೀಡಿಯೋವನ್ನು ಈಗಾಗಲೇ 68 ಸಾವಿರ ಜನ ವೀಕ್ಷಿಸಿದ್ದು, 1.8 ಸಾವಿರ ಜನರು ಇದನ್ನ ತಮ್ಮ ಫೇಸ್‌ ಬುಕ್‌ ಪೇಜ್‌ನಲ್ಲಿ ಶೇರ್‌ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...