alex Certify
ಕನ್ನಡ ದುನಿಯಾ       Mobile App
       

Kannada Duniya

ಬಸ್ ನಡಿ ಸಿಲುಕಿದ್ದ ಬಾಲಕ ಬದುಕಿದ್ದೇ ಒಂದು ಪವಾಡ!

612855-china-bus-accident

ಚೀನಾದಲ್ಲಿ ಪವಾಡ ಸದೃಶ ರೀತಿಯಲ್ಲಿ ಬಾಲಕನೊಬ್ಬ ಬಚಾವ್ ಆಗಿದ್ದಾನೆ. ಯಾನ್ ನಗರದಲ್ಲಿ ಚಲಿಸ್ತಾ ಇದ್ದ ಬಸ್ಸಿನ ಅಡಿಯಲ್ಲಿ 8 ವರ್ಷದ ಬಾಲಕನೊಬ್ಬ ಸಿಕ್ಕಿಹಾಕಿಕೊಂಡಿದ್ದ. ಆತನ ಕಾಲು ಬಸ್ ಚಕ್ರಕ್ಕೆ ಸಿಕ್ಕಿಹಾಕಿಕೊಂಡು ಬಿಟ್ಟಿತ್ತು.

ಬಾಲಕ ನೋವಿನಿಂದ ಒಂದೇ ಸಮನೆ ಕೂಗಿಕೊಳ್ತಾ ಇದ್ದ. ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು ಹೈಡ್ರಾಲಿಕ್ ಜಾಕ್ ಸಹಾಯದಿಂದ ಬಸ್ ಚಕ್ರವನ್ನು ಕಳಚಿ ಬಾಲಕನನ್ನು ಬಚಾವ್ ಮಾಡಿದ್ದಾರೆ. ಚಕ್ರದ ಅಡಿಯಿಂದ ಬಾಲಕನನ್ನು ಹೊರತೆಗೆದಿದ್ದಾರೆ.

ನೋವಿನಿಂದ ಅಳುತ್ತಿದ್ದ ಬಾಲಕನನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯ್ತು. ಈ ದೃಶ್ಯವನ್ನು ಸಾರ್ವಜನಿಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಯುಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...