alex Certify
ಕನ್ನಡ ದುನಿಯಾ       Mobile App
       

Kannada Duniya

ಕಿಕಿ ನಂತ್ರ ವೈರಲ್ ಆಗಿದೆ ಖತರ್ನಾಕ್ ಚಾಲೆಂಜ್

ಪ್ರಪಂಚದಾದ್ಯಂತ ಪೊಲೀಸರು ಕಿಕಿ ಚಾಲೆಂಜ್ ಮಾಡದಂತೆ ಮನವಿ ಮಾಡ್ತಿದ್ದಾರೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಇನ್ನೊಂದು ಚಾಲೆಂಜ್ ವೈರಲ್ ಆಗಿದೆ. ಈ ಚಾಲೆಂಜ್ ಹೆಸ್ರು ಡ್ರ್ಯಾಗನ್ ಬ್ರೀತ್.

ಡ್ರ್ಯಾಗನ್ ಬ್ರೀತ್ ನಲ್ಲಿ ದ್ರವ ರೂಪದ ಸಾರಜನಕದಲ್ಲಿ ಮುಳುಗಿಸಿದ ಕ್ಯಾಂಡಿಯನ್ನು ಬಾಯಿಯೊಳಗಿಡಲಾಗುತ್ತದೆ. ಬಾಯಿಯೊಳಗೆ ಇದನ್ನಿಡುತ್ತಿದ್ದಂತೆ ಡ್ರ್ಯಾಗನ್ ರೂಪದಲ್ಲಿ ಹೊಗೆ ಬಾಯಿ ಹಾಗೂ ಮೂಗಿನಿಂದ ಹೊರಗೆ ಬರುತ್ತದೆ. ಈ ಚಾಲೆಂಜ್ ಮಾಡಿರುವ ಅನೇಕರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಲ್ಲದೆ ಬೇರೆಯವರಿಗೆ ಚಾಲೆಂಜ್ ಮಾಡ್ತಿದ್ದಾರೆ.

ಸಫೊಲ್ಕ್ ಕೌಂಟಿ ಆರೋಗ್ಯ ಇಲಾಖೆ ಈ ಬಗ್ಗೆ ಎಚ್ಚರಿಕೆ ಸಂದೇಶವೊಂದನ್ನು ನೀಡಿದೆ. ಲಿಕ್ವಿಡ್ ನೈಟ್ರೋಜನ್ ಬಾಯಿಯೊಳಗಿಡುವುದ್ರಿಂದ ಗಂಟಲು, ಮೆದುಳು, ಮೂಗಿಗೆ ಹಾನಿಯಾಗಬಹುದು ಎಂದಿದೆ. ಡ್ರ್ಯಾಗನ್ ಬ್ರೀತ್ ಮಾಡಲು ಹೋಗಿ ಫ್ಲೋರಿಡಾದ ಯುವಕನೊಬ್ಬ ಆಸ್ಪತ್ರೆ ಸೇರಿದ್ದಾನೆ.

ದೊಡ್ಡವರಿಂದ ಚಿಕ್ಕವರವರೆಗೆ ಎಲ್ಲರೂ ಈ ಚಾಲೆಂಜ್ ನಲ್ಲಿ ಪಾಲ್ಗೊಂಡಿದ್ದಾರೆ. ಕ್ಯಾಂಡಿ ತಾಪಮಾನ 196 ರಿಂದ 320 ಡಿಗ್ರಿಯವರೆಗೆ ಇರೋದ್ರಿಂದ ವ್ಯಕ್ತಿಗೆ ಮಾರಕವಾಗುವ ಸಾಧ್ಯತೆ ಹೆಚ್ಚಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...