alex Certify
ಕನ್ನಡ ದುನಿಯಾ       Mobile App
       

Kannada Duniya

ಚಿಕಿತ್ಸೆ ಹೆಸರಲ್ಲಿ ಲೈಂಗಿಕ ಶೋಷಣೆ ಮಾಡ್ತಿದ್ದ ವೈದ್ಯನಿಗೆ 175 ವರ್ಷ ಜೈಲು

ಚಿಕಿತ್ಸೆ ಹೆಸರಿನಲ್ಲಿ ಅನೇಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ವೈದ್ಯನೊಬ್ಬನಿಗೆ ಕೋರ್ಟ್ 175 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಮೆರಿಕಾದ ಮಾಜಿ ವೈದ್ಯ ಲಾರಿ ನಸಾರ್ ತನ್ನ ಪೂರ್ತಿ ಜೀವನವನ್ನು ಜೈಲಿನಲ್ಲಿ ಕಳೆಯಬೇಕಾಗಿದೆ. ಲಾರಿ 150ಕ್ಕೂ ಹೆಚ್ಚು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಎಂಬ ಆರೋಪವಿದೆ.

150 ಮಹಿಳೆಯರು ಸಾಕ್ಷ್ಯ ನೀಡಿದ ನಂತ್ರ ಮಿಚಿಗನ್ ಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ. ನಿನ್ನ ಸಾವಿನ ವಾರೆಂಟ್ ಗೆ ನಾನು ಸಹಿ ಹಾಕ್ತಿದ್ದೇನೆ. ನೀನು ಇನ್ನು ಎಂದೂ ಜೈಲಿನಿಂದ ಹೊರಗೆ ಬರಲು ಅರ್ಹನಲ್ಲ. ನೀನು ತುಂಬಾ ಅಪಾಯಕಾರಿ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಆರಂಭದಲ್ಲಿ 7 ಮಹಿಳೆಯರು ದೂರು ದಾಖಲಿಸಿದ್ದರು. ನಂತ್ರ ಈ ಸಂಖ್ಯೆ ಹೆಚ್ಚಾಗ್ತಾ ಹೋಯ್ತು. ಓಲಂಪಿಕ್ಸ್ ನಲ್ಲಿ ಚಿನ್ನದ ಪದಕ ವಿಜೇತೆ ಜಿಮ್ನಾಸ್ಟರ್ ಎಲಿ ರೆಜ್ಮನ್ ಕೂಡ ವೈದ್ಯರ ಬಣ್ಣ ಬಿಚ್ಚಿಟ್ಟಿದ್ದಾರೆ. ಚಿಕಿತ್ಸೆ ಹೆಸರಲ್ಲಿ  ಶೋಷಣೆ ಮಾಡ್ತಿದ್ದ ವೈದ್ಯ ಅದನ್ನು ಚಿಕಿತ್ಸೆ ವಿಧಾನ ಎನ್ನುತ್ತಿದ್ದನಂತೆ.

ಸತತ 7 ದಿನಗಳ ಕಾಲ ವಿಚಾರಣೆ ನಡೆಸಿದ ಕೋರ್ಟ್ ತೀರ್ಪು ನೀಡಿದೆ. ಆದ್ರೆ ವೈದ್ಯ ಮಾತ್ರ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಿಲ್ಲ. ನಾನು ಉತ್ತಮವಾಗಿ ಚಿಕಿತ್ಸೆ ನೀಡ್ತಿದ್ದೆ. ಹಾಗಾಗಿ ಅನೇಕರು ಬರ್ತಿದ್ದರು. ಮಾಧ್ಯಮಗಳು ಸುಳ್ಳು ವರದಿ ನೀಡಿ ದಾರಿ ತಪ್ಪಿಸಿವೆ ಎಂದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...