alex Certify
ಕನ್ನಡ ದುನಿಯಾ       Mobile App
       

Kannada Duniya

ಡವ್ ಜಾಹೀರಾತಿನಲ್ಲಿ ಜನಾಂಗೀಯ ನಿಂದನೆ

ಡವ್ ಕಂಪನಿಯ ಬಾಡಿ ವಾಶ್ ಜಾಹೀರಾತು ಭಾರೀ ಟೀಕೆಗೆ ಗುರಿಯಾಗಿದೆ. ಜಾಹೀರಾತಿನಲ್ಲಿ ಕಂಪನಿ ಜನಾಂಗೀಯ ನಿಂದನೆ ಮಾಡಿದೆ ಅಂತಾ ಸಾಮಾಜಿಕ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗ್ತಿದೆ. ಈ ಜಾಹೀರಾತಿನಲ್ಲಿ ಕಪ್ಪು ವರ್ಣದ ಮಹಿಳೆಯೊಬ್ಬಳು ತನ್ನ ಶರ್ಟ್ ಕಳಚುತ್ತಾಳೆ, ತಾನೊಬ್ಬ ಬಿಳಿಯಳು ಅನ್ನೋದನ್ನು ತೋರಿಸ್ತಾಳೆ.

ಈ ಜಾಹೀರಾತಿನಲ್ಲಿ ಕಪ್ಪು ಮಹಿಳೆಯರಿಗೆ ಡವ್ ಕಂಪನಿ ಅವಮಾನ ಮಾಡಿದೆ ಅನ್ನೋದು ಎಲ್ಲರ ಆರೋಪ. ಅದನ್ನು ಖುದ್ದು ಡವ್ ಕೂಡ ಒಪ್ಪಿಕೊಂಡಿದೆ. ಕಪ್ಪು ವರ್ಣೀಯರನ್ನು ಅವಮಾನಿಸುವ ಉದ್ದೇಶ ಇರಲಿಲ್ಲ, ಅರಿಯದೇ ಮಾಡಿದ ತಪ್ಪು ಅಂತಾ ಕ್ಷಮೆ ಕೇಳಿದೆ.

ಈ ಜಾಹೀರಾತಿನ ಸ್ಕ್ರೀನ್ ಶಾಟ್ ಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದವು. ಕಪ್ಪು ಬಣ್ಣ ಹೊಲಸು, ಬಿಳಿ ಅತ್ಯಂತ ಸ್ವಚ್ಛ ಎಂಬಂತೆ ಜಾಹೀರಾತಿನಲ್ಲಿ ಬಿಂಬಿಸಿರೋದು ಆಕ್ರೋಶಕ್ಕೆ ಕಾರಣವಾಗಿತ್ತು. ಮಾರ್ಕೆಟಿಂಗ್ ತಂತ್ರಕ್ಕಾಗಿ ಈ ರೀತಿ ಜನಾಂಗೀಯ ನಿಂದನೆ ಮಾಡೋದು ತಪ್ಪು ಅಂತಾನೇ ಎಲ್ಲರೂ ಅಭಿಪ್ರಾಯಪಟ್ಟಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...