alex Certify
ಕನ್ನಡ ದುನಿಯಾ       Mobile App
       

Kannada Duniya

ತಮಾಷೆಯ ವಸ್ತುವಾಗಿದೆ ಟ್ರಂಪ್ ವಿಡಿಯೋ….

trump

ಅಮೆರಿಕ ಕಾಂಗ್ರೆಸ್ ಉದ್ದೇಶಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೊಚ್ಚಲ ಭಾಷಣ ಮಾಡಿದ್ರು. ಈ ಭಾಷಣಕ್ಕೂ ಮುನ್ನ ಟ್ರಂಪ್ ಅದನ್ನು ರಿಹರ್ಸಲ್ ಮಾಡ್ತಾ ಇರೋ ವಿಡಿಯೋ ಲೀಕ್ ಆಗಿದ್ದು, ಟ್ವಿಟ್ಟರ್ ನಲ್ಲಿ ಜೋಕ್ ಗಳ ಸುರಿಮಳೆಯಾಗ್ತಿದೆ.

ಕ್ಯಾಪಿಟಲ್ ಹಿಲ್ ಗೆ ಆಗಮಿಸುವ ವೇಳೆ ಟ್ರಂಪ್, ಭಾಷಣದ ಪ್ರತಿ ಹಿಡಿದುಕೊಂಡು ಲಿಪ್ ಸಿಂಕ್ ಮಾಡೋದ್ರಲ್ಲಿ ಬ್ಯುಸಿಯಾಗಿದ್ರು. ವಿವಿಧ ನ್ಯೂಸ್ ಏಜೆನ್ಸಿಗಳ ಲೈವ್ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಅವರ ರಿಹರ್ಸಲ್ ಸ್ಟೈಲ್ ನೋಡಿ ಟ್ವಿಟ್ಟರ್ ಬಳಕೆದಾರರು ಹಾಸ್ಯ ಮಾಡಿದ್ದಾರೆ.

ಚಿಕ್ಕ ಮಕ್ಕಳು ಕಂಠಪಾಠ ಮಾಡಿದಂತೆ ಭಾಷಣವನ್ನೂ ಹೀಗೆ ಓದ್ತಾ ಇರೋ ಅಧ್ಯಕ್ಷರಿಗೆ ಏನನ್ನಬೇಕಪ್ಪಾ ಅಂತಾ ನಕ್ಕಿದ್ದಾರೆ. ಟ್ರಂಪ್ ಈಗ ಎಬಿಸಿಡಿ ಕಲಿಯುತ್ತಿದ್ದಾರಾ ಅಂತಾ ಒಬ್ಬರು ಕೇಳಿದ್ರೆ, ಇನ್ನೊಬ್ಬರು ಬ್ಯಾಡ್ ಸ್ಟೂಡೆಂಟ್ ಅಂತಾ ಕಮೆಂಟ್ ಮಾಡಿದ್ದಾರೆ. ಹೀಗೆ ಹತ್ತಾರು ಬಗೆಯ ಕಾಮಿಡಿ ಕಮೆಂಟ್ ಗಳು ಟ್ವಿಟ್ಟರ್ ನಲ್ಲಿ ಹರಿದಾಡ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...