alex Certify
ಕನ್ನಡ ದುನಿಯಾ       Mobile App
       

Kannada Duniya

‘ದೊಡ್ಡಣ್ಣ’ ಟ್ರಂಪ್ ಖಾಸಗಿ ವಿಮಾನದಲ್ಲಿ ಅಂಥದ್ದೇನಿದೆ.?

plane

ಅಮೆರಿಕದಲ್ಲಿ ಏರ್ ಫೋರ್ಸ್ ಒನ್ ಮೂಲಕ ವೈಟ್ ಹೌಸ್ ಪ್ರವೇಶ ಮಾಡುವುದು ಪ್ರತಿಯೊಬ್ಬ ರಾಜಕಾರಣಿಗಳಿಗೂ ಹೆಮ್ಮೆ ತರುವಂತಹ ವಿಷಯ. ಆದ್ರೆ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಸಂಪ್ರದಾಯವನ್ನು ಮುರಿದಿದ್ದಾರೆ.

ಬರಾಕ್ ಒಬಾಮಾ ಅವರನ್ನು ಭೇಟಿಯಾಗಲು ತಮ್ಮ ಸ್ವಂತ ಬೋಯಿಂಗ್ 757 ವಿಮಾನದಲ್ಲೇ ವೈಟ್ ಹೌಸ್ ಗೆ ಬಂದಿದ್ದಾರೆ. ಅಧ್ಯಕರಾದ್ಮೇಲೂ ಟ್ರಂಪ್ ತಮ್ಮ ಸೆಲೆಬ್ರಿಟಿ ಇಮೇಜ್ ಉಳಿಸಿಕೊಳ್ಳಲು ಪ್ರಯತ್ನಿಸ್ತಿದ್ದಾರಾ ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. 2011ರಲ್ಲಿ ಟ್ರಂಪ್ ವಿಮಾನವೊಂದನ್ನು ಖರೀದಿಸಿದ್ರು, ಅದಕ್ಕೆ ಟಿ-ಬರ್ಡ್ ಅಂತಾನೇ ಕರೆಯಲಾಗ್ತಿತ್ತು. ಆದ್ರೀಗ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಬಳಿಕ ವಿಮಾನದ ಹೆಸರನ್ನು ‘ಟ್ರಂಪ್ ಫೋರ್ಸ್ ಒನ್’ ಅಂತಾ ಬದಲಾಯಿಸಲಾಗಿದೆ.

ಇದರ ಮೌಲ್ಯ ಸುಮಾರು 100 ಮಿಲಿಯನ್ ಡಾಲರ್. ವಿಮಾನದ ಒಳಗಿರುವ ಕಚೇರಿಯಲ್ಲಿ ಚಿನ್ನದ ಅಲಂಕಾರವಿದೆ, 2 ಬೆಡ್ ರೂಮ್ ಇರುವ ವಿಶಾಲವಾದ ವಿಮಾನವಿದು. ಗೋಲ್ಡ್ ಪ್ಲೇಟೆಡ್ ಸೀಟ್ ಬೆಲ್ಟ್ ಗಳಿವೆ, ಟ್ರಂಪ್ ಅವರಿಗೆಂದು ಮೀಸಲಾದ ಬೆಡ್ ರೂಮ್ನಲ್ಲಿ ಅತ್ಯಾಧುನಿಕ ಮಂಚ, ರೇಷ್ಮೆಯಿಂದ ಮಾಡಿದ ತಲೆದಿಂಬುಗಳಿಂದ ಅಲಂಕರಿಸಲಾಗಿದೆ. ಅಲ್ಲೇ ಹೋಂ ಥಿಯೇಟರ್ ವ್ಯವಸ್ಥೆಯೂ ಇರುವುದು ವಿಶೇಷ.

ಇನ್ನು ಅಧ್ಯಕ್ಷರ ಅಧಿಕೃತ ವಿಮಾನ ಏರ್ ಫೋರ್ಸ್ ಒನ್ ಸ್ವಲ್ಪ ಚಿಕ್ಕದಾಗಿದೆ. 102 ಜನರು ಕುಳಿತುಕೊಳ್ಳುವಂತಹ ಕೋಣೆಯಿದೆ. ಕಾನ್ಫರೆನ್ಸ್ ಹಾಲ್ ಹಾಗೂ ಜಿಮ್ ವ್ಯವಸ್ಥೆಯೂ ಇದೆ. ಇನ್ ಬ್ಯುಲ್ಟ್ ಮೆಡಿಕಲ್ ಸೆಂಟರ್ ಇದೆ, ಬೆರಳ ತುದಿಯಲ್ಲೇ ದೊಡ್ಡಣ್ಣದ ಆರೋಗ್ಯ ತಪಾಸಣೆ ಮಾಡಬಹುದು. ಕ್ಲಿಂಟನ್ ಪರ ಚುನಾವಣಾ ಪ್ರಚಾರ ನಡೆಸಲು ಒಬಾಮಾ ಇದೇ ವಿಮಾನ ಬಳಸಿದ್ದರು. ಆದ್ರೆ ನೂತನ ಅಧ್ಯಕ್ಷ ಟ್ರಂಪ್, ಏರ್ ಫೋರ್ಸ್ ಒನ್ ವಿಮಾನದಲ್ಲಿ ಹಳೆಯ ಎಂಜಿನ್ ಇದೆ ಅಂತಾ ಟೀಕಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...