alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕಿಸ್ತಾನಕ್ಕೆ ಖಡಕ್ ವಾರ್ನಿಂಗ್ ಮಾಡಿದ ಟ್ರಂಪ್

ARLINGTON, VA - AUGUST 21: U.S. President Donald Trump delivers remarks on Americas military involvement in Afghanistan at the Fort Myer military base on August 21, 2017 in Arlington, Virginia. Trump was expected to announce a modest increase in troop levels in Afghanistan, the result of a growing concern by the Pentagon over setbacks on the battlefield for the Afghan military against Taliban and al-Qaeda forces. Mark Wilson/Getty Images/AFP

ವಾಷಿಂಗ್ಟನ್: ಉಗ್ರರಿಗೆ ಪಾಕಿಸ್ತಾನ ಸ್ವರ್ಗದಂತಿದೆ. ಉಗ್ರರನ್ನು ದಮನ ಮಾಡಲು ಪಾಕಿಸ್ತಾನ ಮುಂದಾಗದಿದ್ದರೆ ನಾವೇ ಕ್ರಮ ಕೈಗೊಳ್ಳುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ.

ವಾಷಿಂಗ್ಟನ್ ಬಳಿ ಇರುವ ಸೇನಾ ನೆಲೆಯಲ್ಲಿ ಸೌತ್ ಏಷ್ಯಾ ಬಗೆಗಿನ ಅಮೆರಿಕದ ಹೊಸ ಭದ್ರತಾ ನೀತಿಯನ್ನು ಪ್ರಕಟಿಸಿ, ದೇಶವನ್ನುದ್ದೇಶಿಸಿ ಅವರು ಮಾತನಾಡಿ, ಪಾಕಿಸ್ತಾನ ಉಗ್ರರಿಗೆ ನೆಲೆ ಕಲ್ಪಿಸುವುದನ್ನು ನಿಲ್ಲಿಸಬೇಕೆಂದು ತಾಕೀತು ಮಾಡಿದ್ದಾರೆ.

ನಾವು ಆಫ್ಘಾನಿಸ್ತಾನದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದೇವೆ. ನಮ್ಮ ಜೊತೆಯಾಗಿದ್ದರೆ ಪಾಕಿಸ್ತಾನಕ್ಕೆ ಹೆಚ್ಚಿನ ಪ್ರಯೋಜನ ಸಿಗುತ್ತಿತ್ತು. ಆದರೆ, ಉಗ್ರರಿಗೆ ನೆಲೆ ಕಲ್ಪಿಸುವ ಮೂಲಕ ಉತ್ತಮ ಅವಕಾಶಗಳನ್ನು ಪಾಕಿಸ್ತಾನ ಕಳೆದುಕೊಂಡಿದೆ ಎಂದು ಟೀಕಿಸಿದ್ದಾರೆ.

ಶಾಂತಿ ಸುವ್ಯಸ್ಥೆಯನ್ನು ಕಾಪಾಡಲು ಪಾಕಿಸ್ತಾನ ಕೈ ಜೋಡಿಸಬೇಕಿದೆ. ತಪ್ಪು ತಿದ್ದಿಕೊಳ್ಳಲು ಅದಕ್ಕೆ ಇದು ಸಕಾಲವಾಗಿದೆ. ಉಗ್ರರನ್ನು ಸದೆಬಡಿಯಲು ಪಾಕ್ ಮುಂದಾಗದಿದ್ದರೆ, ಅದಕ್ಕೆ ನೀಡಲಾಗುತ್ತಿರುವ ಎಲ್ಲಾ ನೆರವನ್ನು ನಿಲ್ಲಿಸಲಾಗುತ್ತದೆ ಎಂದು ಗುಡುಗಿದ್ದಾರೆ.

ಪಾಕಿಸ್ತಾನ ನಮ್ಮಿಂದ ಅಪಾರ ಪ್ರಯೋಜನ ಪಡೆದುಕೊಳ್ಳುತ್ತಿದೆ. ಆದರೆ, ನಮ್ಮ ವಿರುದ್ಧವೇ ಇರುವ ಉಗ್ರರಿಗೆ ನೆಲೆ ಕಲ್ಪಿಸಿ ಸಹಕರಿಸುತ್ತಿದೆ. ಇದನ್ನು ಕೂಡಲೇ ನಿಲ್ಲಿಸಬೇಕೆಂದು ಹೇಳಿದ್ದಾರೆ.

ಹೊಸ ನೀತಿಯ ಅನ್ವಯ ಅಫ್ಘಾನಿಸ್ತಾನಕ್ಕೆ ಇನ್ನಷ್ಟು ಸೇನೆಯನ್ನು ನಿಯೋಜಿಸಿ ಆ ದೇಶ ಇಸ್ಲಾಮಿಕ್ ಉಗ್ರರ ನೆಲೆಯಾಗುವುದನ್ನು ನಾವು ತಪ್ಪಿಸುತ್ತೇವೆ. ಪಾಕ್ ವಿಚಾರದಲ್ಲಿ ನಾವು ದೀರ್ಘಾವಧಿ ಕಾಲ ಸುಮ್ಮನೆ ಇರಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...