alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ತನ ಕಸಿಗೆ ಮಗಳನ್ನು ಒತ್ತಾಯಿಸುತ್ತಿದ್ದ ಡೊನಾಲ್ಡ್ ಟ್ರಂಪ್…!

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಗಳು ಇವಾಂಕಾಗೆ ಸ್ತನ ಕಸಿ ಮಾಡಿಸುವಂತೆ ಒತ್ತಡ ಹೇರುತ್ತಿದ್ದರಂತೆ. ಈ ಸಂಗತಿ ಇತ್ತೀಚಿಗೆ ಬಿಡುಗಡೆಯಾದ Born Trump: Inside America’s First Family ಪುಸ್ತಕದ ಮೂಲಕ ಬಹಿರಂಗವಾಗಿದೆ. ಪುಸ್ತಕದಲ್ಲಿ ಲೇಖಕಿ ಎಮಿಲಿ ಜೇನ್ ಫಾಕ್ಸ್ ಇವಾಂಕಾ ಬಗ್ಗೆ ಅನೇಕ ಸಂಗತಿಗಳನ್ನು ಹೇಳಿದ್ದಾರೆ.

ಹದಿಹರೆಯದಲ್ಲಿಯೇ ಇವಾಂಕಾ ಮಾಡೆಲ್ ಆಗುವ ಆಸೆ ಹೊಂದಿದ್ದರಂತೆ. ಫೋಟೋಶೂಟ್ ಗಾಗಿ ಇವಾಂಕಾ ಪ್ರತಿ ವರ್ಷ 44,000 ಡಾಲರ್ (ಸುಮಾರು 30 ಲಕ್ಷ ರೂ.) ಖರ್ಚು ಮಾಡುತ್ತಿದ್ದರಂತೆ. ಈ ಪುಸ್ತಕದಲ್ಲಿ ಟ್ರಂಪ್ ಹಾಗೂ ಅವ್ರ ಕುಟುಂಬದ ಖಾಸಗಿ ವಿಷ್ಯಗಳ ಬಗ್ಗೆ ಬರೆಯಲಾಗಿದೆ.

ಮಗಳ ಮಾಡೆಲಿಂಗ್ ಬಯಕೆಗೆ ಟ್ರಂಪ್ ಪ್ರೋತ್ಸಾಹ ನೀಡಿದ್ದರಂತೆ. ಇವಾಂಕಾ ಸ್ತನ ಕಸಿ ಮಾಡಿಸಿಕೊಂಡ್ರೆ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಬಹುದೆಂದು ಟ್ರಂಪ್ ಅಂದಾಜಿಸಿದ್ದರಂತೆ. ಇದೇ ಕಾರಣಕ್ಕೆ ಸ್ತನ ಕಸಿಗೆ ಮಗಳನ್ನು ಒತ್ತಾಯಿಸಿದ್ದರಂತೆ. ಟ್ರಂಪ್ ಸಹೋದರಿ ಮೇರಿಯನ್, ಟ್ರಂಪ್ ಗೆ ಕರೆ ಮಾಡಿ ಸ್ತನ ಕಸಿ ಮಾಡಿಸಿದ್ರೆ ಮಗಳ ಜೀವನ ಹಾಳಾಗುತ್ತದೆ ಎಂಬ ಸಲಹೆ ನೀಡಿದ್ರಂತೆ.

ಕಾಲೇಜಿನ ಮೊದಲ ಕ್ಲಾಸ್ ಬಂಕ್ ಮಾಡಿ ಹೊರಗೆ ಬರ್ತಿದ್ದ ಇವಾಂಕಾ ಎರಡು ಸಿಗರೇಟ್ ಸೇದುತ್ತಿದ್ದರಂತೆ. ಮಗಳು ವೀಕೆಂಡ್ ನಲ್ಲಿ ನ್ಯೂಯಾರ್ಕ್ ಗೆ ಬರಲು ಸಹಾಯವಾಗಲಿ ಎನ್ನುವ ಕಾರಣಕ್ಕೆ ಹೆಲಿಪ್ಯಾಡ್ ನಿರ್ಮಾಣ ಮಾಡುವಂತೆ ಶಾಲಾ ಆಡಳಿತ ಸಿಬ್ಬಂದಿಗೆ ಸಲಹೆ ನೀಡಿದ್ದರಂತೆ ಟ್ರಂಪ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...