alex Certify
ಕನ್ನಡ ದುನಿಯಾ       Mobile App
       

Kannada Duniya

ಡೊನಾಲ್ಡ್ ಟ್ರಂಪ್ ಅಜ್ಞಾನಿ ಎಂದ ಸ್ವಪಕ್ಷೀಯರು

Republican presidential candidate Donald Trump waves after delivering an economic policy speech to the Detroit Economic Club, Monday, Aug. 8, 2016, in Detroit. (AP Photo/Evan Vucci)

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ವಿರುದ್ಧ ಸ್ಪಪಕ್ಷದವರೇ ಅಸಮಾಧಾನಗೊಂದಿದ್ದಾರೆ. ಟ್ರಂಪ್ ಅಜ್ಞಾನಿಯಾಗಿದ್ದು, ಅವರಿಗೆ ಮತ ನೀಡುವುದಿಲ್ಲ ಎಂದು ರಿಪಬ್ಲಿಕನ್ ಪಕ್ಷದವರೇ ಹೇಳಿದ್ದಾರೆ.

ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳಾಗಿ ಸ್ಪರ್ಧಿಸಿ, ಅಮೆರಿಕ ಅಧ್ಯಕ್ಷ ಸ್ಥಾನಕ್ಕೇರಿದ್ದ ನಿಕ್ಸನ್ ಅವರಿಂದ ಹಿಡಿದು ಜಾರ್ಜ್ ಬುಷ್ ಅವರ ಆಡಳಿತದಲ್ಲಿ ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದ ರಿಪಬ್ಲಿಕನ್ ಪಕ್ಷದ ನಾಯಕರು, ತಮ್ಮ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧವೇ ಪ್ರಚಾರ ಆರಂಭಿಸಿದ್ದಾರೆ. ಅಮೆರಿಕ ಇತಿಹಾಸದಲ್ಲಿಯೇ, ಮೊದಲ ಬಾರಿಗೆ ಭಂಡ, ಅಜ್ಞಾನಿ, ಅಧ್ಯಕ್ಷ ಎನಿಸಿಕೊಳ್ಳಲಿರುವ ಟ್ರಂಪ್ ಗೆ ನಮ್ಮ ಮತವಿಲ್ಲ ಎಂದು ಪ್ರಮುಖ ನಾಯಕರು ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್, ರಿಯಾಲಿಟಿ ಶೋ ಸ್ಟಾರ್ ಇದ್ದಂತೆ. ಅಮೆರಿಕ ಅಧ್ಯಕ್ಷರಾಗುವ ಅರ್ಹತೆ ಇಲ್ಲದ ಟ್ರಂಪ್ ತಾಳ್ಮೆ ಇಲ್ಲದ ವ್ಯಕ್ತಿ. ಅವರಿಗೆ ಯಾವುದೇ ತಾತ್ವಿಕ ಸಿದ್ಧಾಂತಗಳಿಲ್ಲ. ಅವರಿಂದ ದೇಶದ ಸುರಕ್ಷತೆಗೆ ಧಕ್ಕೆ ಬರಬಹುದಾದ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...